ಕೊಟ್ಟಿಗೆಗೆ ಬೆಂಕಿ: ಅಪಾರ ನಷ್ಟ
ಸುಳ್ಯ: ಐವರ್ನಾಡು ಗ್ರಾಮದ ನಿಡುಬೆ ಎಂಬಲ್ಲಿ ಕೊಟ್ಟಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ನಿಡುಬೆಯ ಕೃಷ್ಣಪ್ಪ ಗೌಡರ ಕೊಟ್ಟಿಗೆಗೆ ಬುಧವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋದ ಪರಿಣಾಮ ಕೊಟ್ಟಿಗೆಯೊಳಗಿದ್ದ ರಬ್ಬರ್, ತೆಂಗಿನಕಾಯಿ, ಪಂಪ್, ಮರಮಟ್ಟು ಸೇರಿದಂತೆ ಸುಮಾರು 3 ಲಕ್ಷ ನಷ್ಟ ಸಂಭವಿಸಿದೆ ಎನ್ನಲಾಗಿದೆ.