ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ
ಬೆಳ್ತಂಗಡಿ: ಇಲ್ಲಿನ ಪ್ರಸನ್ನ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದ ಘಟನೆ ಗುರುವಾರ ನಡೆದಿದೆ.
ಎರಡನೇ ವರ್ಷದ ಎಂಜಿನಿಯರಿಂಗ್ ವಿಭಾಗದ ಶಿಕ್ಷಣ ಪಡೆಯುತ್ತಿರುವ ಮಹಮ್ಮದ್ ಹಾರೀಫ್ ಎಂಬವರ ಮೇಲೆ ಅದೇ ಕಾಲೇಜಿನ ಪ್ರಜ್ವಲ್, ಅನುಪ್, ಶರತ್, ಸದಾನಂದ, ಪ್ರಸನ್ನ ಎಂಬವರು ಸೇರಿ ಹಲ್ಲೆ ಮಾಡಿದ್ದು, ಗಂಭೀರ ಗಾಯಗಳಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಮ್ಮದ್ ಹಾರೀಫ್ ಕಳೆದ ವರ್ಷ ದ್ವಿತಿಯ ಎಂಜಿನಿಯರಿಂಗ್ ವಿಭಾಗದಲ್ಲಿ ಅನುತ್ತೀರ್ಣನಾಗಿದ್ದು, ಮತ್ತೆ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದ ಎನ್ನಲಾಗಿದೆ.
ಕಾಲೇಜಿನ ವಿದ್ಯಾರ್ಥಿ ಅಲ್ಲದ ಈತ ಕಾಲೇಜಿಗೆ ಯಾಕೆ ಬಂದ ಎಂದು ಪ್ರಶ್ನಿಸಿದಾಗ ಪರಸ್ಪರ ಹಲ್ಲೆ ನಡೆದಿದೆ ಎನ್ನಲಾಗಿದೆ. ಇದರ ಪ್ರತಿಯಾಗಿ ಅದೇ ಕಾಲೇಜಿನ ವಿದ್ಯಾರ್ಥಿ ಅನುಪ್ ಎಂಬವರ ಮೇಲೆ ಹಾರೀಫ್, ಅಫ್ಜಲ್, ಅಜೀಜ್ ಸೇರಿ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿರುವ ಅನುಪ್ನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.