ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದ.ಕ: ಪ್ರಥಮ ಹಂತದ ಪಲ್ಸ್ ಪೋಲಿಯೊ ಶೇ.93 ಸಾಧನೆ

Lingaraj Badiger
Updated On : 21 Jan 2013, 12:26 pm

ಮಂಗಳೂರು: ಪೊಲಿಯೋ ಮುಕ್ತ ದೇಶಕ್ಕಾಗಿ 2013ನೇ ಸಾಲಿನ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪ್ರಕಾಶ್, ಲೇಡಿಹಿಲ್‌ನ ಮಹಾನಗರ ಪಾಲಿಕೆ ಬೂತ್‌ನಲ್ಲಿ ಮೇಯರ್ ಗುಲ್ಜಾರ್‌ಬಾನು ಭಾನುವಾರ ಚಾಲನೆ ಮಗುವಿಗೆ ಲಸಿಕೆ ಹಾಕುವ ಮೂಲಕ ನೀಡಿದರು.
ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಜಂಟಿ ಆಯುಕ್ತ ಶ್ರೀಕಾಂತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀರಂಗಪ್ಪ, ಸರ್ಜನ್ ಡಾ.ಸರೋಜ, ಆರ್‌ಸಿಎಚ್ ಅಧಿಕಾರಿ ಡಾ.ರುಕ್ಮಿಣಿ, ನಿವಾಸಿ ವೈದ್ಯಾಧಿಕಾರಿ ಡಾ.ಈರಪ್ಪ, ಪಾಲಿಕೆ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ.ಸತೀಶ್ಚಂದ್ರ ಹಾಜರಿದ್ದರು.
ಜಿಲ್ಲೆಯಲ್ಲಿ ಶೇ.93 ಸಾಧನೆ: ಜಿಲ್ಲೆಯಲ್ಲಿ 163860 ಮಕ್ಕಳಲ್ಲಿ 147920 ಮಕ್ಕಳಿಗೆ ಮೊದಲ ದಿನ ಪೊಲಿಯೋ ಲಸಿಕೆ ಹಾಕಲಾಗಿದೆ. ಗ್ರಾಮೀಣದಲ್ಲಿ 112768, ನಗರ ಪ್ರದೇಶದಲ್ಲಿ 147920 ಮಕ್ಕಳಿಗೆ, ಅಲ್ಲದೆ 5 ಕಡೆಗಳಲ್ಲಿ 538 ವಲಸೆ ಮಕ್ಕಳಿಗೆ ಪೊಲಿಯೋ ಹನಿ ನೀಡಲಾಗಿದೆ.
ಮಂಗಳೂರು ಗ್ರಾಮೀಣ-30309ರಲ್ಲಿ 27551, ಮಂಗಳೂರು ನಗರ-20380ರಲ್ಲಿ 16665, ಮಂಗಳೂರು ಹೊರವಲಯ-23657ರಲ್ಲಿ 18816, ಪುತ್ತೂರು ಗ್ರಾಮೀಣ-19991ರಲ್ಲಿ 19357, ಪುತ್ತೂರು ನಗರ-3201ರಲ್ಲಿ 2431, ಬೆಳ್ತಂಗಡಿ ಗ್ರಾಮೀಣ-22507ರಲ್ಲಿ 21890, ಬಂಟ್ವಾಳ ಗ್ರಾಮೀಣ-28353ರಲ್ಲಿ 27140, ಬಂಟ್ವಾಳ ನಗರ-3854ರಲ್ಲಿ 3468, ಸುಳ್ಯ-11608ರಲ್ಲಿ 10602 ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement