ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಷಢಾದರ, ಗರ್ಭಾನ್ಯಾಸ
ಸುಬ್ರಹ್ಮಣ್ಯ: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ದೇವಳದಲ್ಲಿ ಷಢಾದರ ಮತ್ತು ಗರ್ಭಾನ್ಯಾಸ ಕಾರ್ಯಕ್ರಮ ನೆರವೇರಿತು.
ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ಬೆಳಗ್ಗೆ ಕುಂಭ ಲಗ್ನ ಸುಮೂರ್ತದಲ್ಲಿ ಷಢಾದರ ಪ್ರತಿಷ್ಠೆ ನಡೆಯಿತು. ಊರಿನ ಭಕ್ತರು ಚಿನ್ನ, ಬೆಳ್ಳಿ, ನವರತ್ನ ಹಾಗೂ ಹಳೆಯ ಕಾಲದ ಬೆಲೆ ಬಾಳುವ ವಸ್ತುಗಳನ್ನು ಸಮರ್ಪಿಸಿದರು. ಬಳಿಕ 800 ವರ್ಷಗಳ ಹಿಂದೆ ನಿರ್ಮಿಸಿರುವ ಕುರಿತು ಪ್ರತೀತಿ ಇರುವ ಮುನೀಶ್ವರನಿಗೆ ಗರ್ಭಗುಡಿ ಕಟ್ಟಿ ಅದರಲ್ಲಿ ಮುನೀಶ್ವರನನ್ನು ಪ್ರತಿಷ್ಠಾಪನೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲ ರಾವ್, ಕಾರ್ಯದರ್ಶಿ ಮುನಿಯಂಗಳ ಪ್ರಸಾದ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಡ್ಯಪ್ಪ ಗೌಡ, ಸಂಚಾಲಕ ಬಾಲಕೃಷ್ಣ ಗೌಡ, ಉದಯ ಕುಮಾರ್, ಕೋಶಾಧಿಕಾರಿ ಹಿರಿಯಣ್ಣ, ಕೇಶವ ಮತ್ತು ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿ ಸದಸ್ಯರು, ಉಸ್ತುವಾರಿ ಸಮಿತಿ, ಬೈಲುವಾರು ಸಮಿತಿ ಸದಸ್ಯರು ಇದ್ದರು.