ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಣಂಬೂರಿನಲ್ಲಿ ಕುಮಟಾ ನಿವಾಸಿ ಕೊಲೆ? (ಸುದ್ದಿ ಸಂಕ್ಷೇಪ)

Mainashree
Updated On : 22 Jan 2013, 2:23 am

ಮಂಗಳೂರು: ಪಣಂಬೂರಿನ ಎನ್‌ಎಂಪಿಟಿ ಬಳಿ ಗಂಡಸಿನ ಶವ ಕೊಲೆಯಾದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಶವದ ಬಳಿ ದೊರೆತ ಪಡಿತರ ಚೀಟಿಯಲ್ಲಿ ಮಂಜುನಾಥ ವಿಷ್ಣು ಮಡಿವಾಳ ಕುಮಟಾ ಎಂದು ಹೆಸರು ದೊರೆತಿದೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ಎಸ್‌ಐ ಭಾರತಿ ಗಸ್ತುನಿರತ ವೇಳೆ ಆರ್‌ಸಿಎಟ್‌ಡಬ್ಲ್ಯೂ ವಸತಿಗೃಹ ಬಳಿ ತಲೆಗೆ ಕಲ್ಲೇಟಾಗಿ ವ್ಯಕ್ತಿಯೊಬ್ಬ ಬಿದ್ದಿರುವುದು ಗೋಚರಿಸಿತ್ತು. ಪರಿಶೀಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿತ್ತು. ಮೃತದೇಹದ ಅಂಗಿಯಲ್ಲಿದ್ದ ಪಡಿತರ ಚೀಟಿ ಲಭ್ಯವಾಗಿದ್ದು, ಅದರಲ್ಲಿ ಮಂಜುನಾಥ ವಿಷ್ಣು ಮಡಿವಾಳ, 43 ವರ್ಷ, ಮಡಿವಾಳ, ಕುಮಟಾ ಎಂದು ಬರೆಯಲಾಗಿದೆ. ಇದು ಅದೇ ಹೆಸರಿನವರ ಶವವೇ ಎಂಬುದು ಸ್ಪಷ್ಟವಾಗಿಲ್ಲ. ಯಾರೋ ದುಷ್ಕರ್ಮಿಗಳು ಹಣ/ಸೊತ್ತು ದೋಚಲು ಇಲ್ಲೇಲೇ ಇನ್ನಾವುದೋ ಕಾರಣಕ್ಕೆ ಹಲ್ಲೆ ನಡೆಸಿ ತಲೆಗೆ ಕಲ್ಲು ಹಾಕಿ ಕಲೆ ಮಾಡಿರಬೇಕು ಎಂದು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪರಿತ ಶವ ಪತ್ತೆ

ಮಂಗಳೂರು: ನಗರದ ಕೃಷ್ಣಭವನ ಬಳಿಯ ಸಾರ್ವಜನಿಕ ಶೌಚಾಲಯದ ಮೆಟ್ಟಿಲಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾದ ಘಟನೆ ಸೋಮವಾರ ವರದಿಯಾಗಿದೆ. ಬೆಳಗ್ಗೆ ಪಿಸಿಆರ್ ಕರ್ತವ್ಯದಲ್ಲಿದ್ದಾಗ ಪೊಲೀಸ್ ನಿಯಂತ್ರಣ ಕಚೇರಿಯಿಂದ ಬಂದ ಸಂದೇಶ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋದಾಗ, ಸುಮಾರು 50ರಿಂದ 55 ವರ್ಷದ ಗಂಡಸಿನ ಶವ ಕಂಡುಬಂದಿತ್ತು. ಶವವನ್ನು ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಮಂಗಳೂರು ಉತ್ತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಸ್ವಾಭಾವಿಕ ಸಾವು
ಮಂಗಳೂರು: ಕಾಳಿಕಾಂಬ ದೇವಸ್ಥಾನದಲ್ಲಿ ಶುಚಿತ್ವ ಕೆಲಸ ಮಾಡಿಕೊಂಡಿದ್ದ ನಾಗಪ್ಪ(70)ಕುಸಿದುಬಿದ್ದು ಸಾವಿಗೀಡಾದ ಘಟನೆ ಸೋಮವಾರ ವರದಿಯಾಗಿದೆ. ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದ ಅವರನ್ನು ವೆನ್ಲಾಕ್‌ಗೆ ಸೇರಿಸಲಾಗಿತ್ತು. ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ನಾಗಪ್ಪ ಶಿಕಾರಿಪುರ ತಾಲೂಕಿನ ಕಾನಪಳ್ಳಿ ನಿವಾಸಿ. ಮಂಗಳೂರು ಉ.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ವಿವಿಯಲ್ಲಿ ಉದ್ಯೋಗ ಮೇಳ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಹಳೆ ವಿದ್ಯಾರ್ಥಿ ಸಂಘದ ವೆಬ್‌ಸೈಟ್‌ಗೆ ಚಾಲನೆ ಮತ್ತು ಬೃಹತ್ ಉದ್ಯೋಗ ಮೇಳ ಉದ್ಘಾಟನೆ ಜ.22ರಂದು ವಿವಿ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಜಿಲ್ಲಾ ಎಸ್ಪಿ ಅಭಿಷೇಕ್ ಗೋಯಲ್, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಭಾಗವಹಿಸುವರು. ಇದೇ ಸಂದರ್ಭ 'ಮಂಗಳಾ ಹಳೆ ವಿದ್ಯಾರ್ಥಿ ಸಂಘ'ದ ವೆಬ್‌ಸೈಟ್‌ಗೆ ಚಾಲನೆ ನೀಡಲಾಗುವುದು. ವಿವಿ ವೆಬ್‌ಸೈಟ್‌ಗೆ ಇದರ ಲಿಂಕ್ ಕಲ್ಪಿಸಲಾಗುವುದು ಎಂದರು. 1980ರಲ್ಲಿ ಮಂಗಳಾ ಗಂಗೋತ್ರಿಯಲ್ಲಿ ವಿವಿ ಪ್ರಾರಂಭವಾಗಿದ್ದು, 25 ಸಾವಿರ ಹಳೆ ವಿದ್ಯಾರ್ಥಿಗಳ ಪೈಕಿ 5 ಸಾವಿರ ಮಾತ್ರ ಸದಸ್ಯರಾಗಿದ್ದಾರೆ. ಮಂಗಳೂರು, ಉಡುಪಿ ಹಾಗೂ ಕೊಡಗಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಘಟಕ ತೆರೆಯಲಾಗಿದೆ ಎಂದರು. ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗ ಮೇಳ ನಡೆಯುತ್ತಿದ್ದು, 15 ಕಂಪನಿಗಳು ಆಗಮಿಸುವ ನಿರೀಕ್ಷೆ ಇದೆ ಎಂದರು. ವಿವರಕ್ಕೆ ಪ್ರೊ.ಟಿ.ಪಿ.ಎಂ.ಪಕ್ಕಳ (9448214818).

ಚುನಾವಣಾ ಪೆಟ್ಟಿಗೆ ಕಳವು ಆರೋಪಿಗಳ ಸೆರೆ
ಮಂಗಳೂರು: ಚುನಾವಣೆಯ ಪೆಟ್ಟಿಗೆಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿ, ಪೆಟ್ಟಿಗೆಗಳನ್ನು ವಶಪಡಿಸಿದ್ದಾರೆ.
 ಎಸ್‌ಐ ಶಿವರುದ್ರಪ್ಪ, ಸಿಬ್ಬಂದಿಗಳು ಭಾನುವಾರ ರಾತ್ರಿ ಗಸ್ತು ನಿರತ ವೇಳೆ ನಗರದ ಬದ್ರಿಯಾ ಜಂಕ್ಷನ್ ಬಳಿ ಆರೋಪಿ ಕೇರಳದ ಕಾಟಕ್ಕಾಡ್‌ನ ಉಣ್ಣಿಕೃಷ್ಣ ಯಾನೆ ವಿನು(35), ಕುಪ್ಪೆಪದವಿನ ಗಣೇಶ್ ಪೂಜಾರಿ(26)ಗೋಣಿ ಚೀಲದಲ್ಲಿ ಚುನಾವಣಾ ಪೆಟ್ಟಿಗೆಗಳನ್ನು ತುಂಬಿಸಿ ಕೊಂಡೊಯ್ಯುತ್ತಿದ್ದುದು ಪತ್ತೆಯಾಗಿತ್ತು. ತಾಲೂಕು ಕಚೇರಿಯಲ್ಲಿ ಸ್ವೀಪರ್ ಆಗಿರುವ ಪಾಂಡೇಶ್ವರ ನ್ಯೂ ರೋಡ್ ನಿವಾಸಿ ಗಣೇಶ್ ಕೂಡ ಆರೋಪಿಯಾಗಿದ್ದು, ಆತ ನಾಪತ್ತೆಯಾಗಿದ್ದಾನೆ. ಆತ ಸಹಾಯಕ ಆಯುಕ್ತರ ಕಚೇರಿ ಹಿಂಭಾಗದ ಪೊದೆಯಲ್ಲಿ ಅಡಗಿಸಿಟ್ಟಿದ್ದ 4 ಪೆಟ್ಟಿಗೆಗಳು ಸೇರಿ ಒಟ್ಟು 6 ಪೆಟ್ಟಿಗೆಗಳನ್ನು ವಶಪಡಿಸಲಾಗಿದೆ. ದಕ್ಷಿಣ ಠಾಣೆಯಲ್ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement