ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೃತದೇಹ 'ಮೈ ಬಿಸಿ' ಗೊಂದಲ;ತಡವಾಗಿ ನಡೆದ ಅಂತ್ಯ ಸಂಸ್ಕಾರ

Mainashree
Updated On : 22 Jan 2013, 2:24 am

ಸುಳ್ಯ: ಮೃತದೇಹದ ಮೈ ಬಿಸಿ ತಂದ ಗೊಂದಲದಿಂದಾಗಿ ಅಂತ್ಯಸಂಸ್ಕಾರ ತಡವಾಗಿ ನಡೆದ ಘಟನೆ ಮಡಪ್ಪಾಡಿ ಗ್ರಾಮದಲ್ಲಿ ನಡೆದಿದೆ.  ಮಡಪ್ಪಾಡಿ ಗ್ರಾಮದ ದೇರ್ಮಜಲಿನ ರಾಮಕೃಷ್ಣ ಎಂಬವರ ಪತ್ನಿ  ನಾಗವೇಣಿ (40) ಭಾನುವಾರ ನಿಧನರಾದರು. ರಕ್ತದೊತ್ತಡದಿಂದ ಅವರನ್ನು ಶನಿವಾರ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಮಧ್ಯಾಹ್ನ ಅವರ ಮೃತದೇಹವನ್ನು ಮಡಪ್ಪಾಡಿಯ ಮನೆಗೆ ತರಲಾಗಿತ್ತು. ಅವರ ಅಂತ್ಯಸಂಸ್ಕಾರದ ವಿದಿವಿಧಾನ ನೆರವೇರಿಸುತ್ತಿರುವಾಗ ದೇಹ ಬಿಸಿಯಾಗಿರುವುದನ್ನು ಅರಿತ ಮನೆಯವರಿಗೆ ನಾಗವೇಣಿ ಜೀವ ಹೋಗಿರಲಿಕ್ಕಿಲ್ಲವೆಂಬ ಅನುಮಾನ ಮೂಡಿತು.  ಪುನಃ ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿ 108 ಆಂಬ್ಯುಲೆನ್ಸ್  ಬರಹೇಳಲಾಯಿತು. ಅಂತ್ಯಸಂಸ್ಕಾರದ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಸಂಜೆ ವೇಳೆಗೆ ಆಂಬ್ಯುಲೆನ್ಸ್‌ನವರು ಬಂದು ಪರೀಕ್ಷಿಸಿ 'ಜೀವ ಹೋಗಿದೆ' ದೃಢಪಡಿಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement