ಶಾರ್ಟ್ ಸರ್ಕ್ಯೂಟ್; ಧರ್ಮಸ್ಥಳದಲ್ಲಿ ಅಂಗಡಿ ಭಸ್ಮ
ಬೆಳ್ತಂಗಡಿ: ಧರ್ಮಸ್ಥಳದ ಸಾಲು ಅಂಗಡಿಗಳಲ್ಲಿರುವ ಒಂದು ಅಂಗಡಿಗೆ ಭಾನುವಾರ ರಾತ್ರಿ ವೇಳೆ ಬೆಂಕಿ ತಗುಲಿ ಸಾಮಾನು ಸರಂಜಾಮು ಸಂಪೂರ್ಣ ಭಸ್ಮವಾಗಿದೆ. ಧರ್ಮಸ್ಥಳ ಗ್ರಾ.ಪಂ.ಸದಸ್ಯ ಶ್ರೀನಿವಾಸ ಪುಟಾಣಿ ಎಂಬವರ ಅಂಗಡಿ ಇದಾಗಿದ್ದು ರಾತ್ರಿ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ಘಟನೆಯಿಂದ ಸುಮಾರು ರು. 8 ಲಕ್ಷ ನಷ್ಟ ಅಂದಾಜಿಸಲಾಗಿದೆ. ಬೆಂಕಿ ಜ್ವಾಲೆಗಳು ಕಂಡಾಕ್ಷಣ ಊರವರು ಹಾಗೂ ಅಗ್ನಿ ಶಾಮಕ ದಳದವರೂ ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಅಂಗಡಿ ಅದಾಗಲೇ ಪೂರ್ತಿ ಹೊತ್ತಿ ಉರಿದಿದೆ. ಪಕ್ಕದ ಅಂಗಡಿಗಳಿಗೂ ಬೆಂಕಿಯ ಜ್ವಾಲೆಗಳು ತಗುಲಿ ಅಲ್ಪ ನಷ್ಟ ಉಂಟಾಗಿದೆ. ಧರ್ಮಸ್ಥಳ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ದಾಖಲಿಸಿಕೊಂಡಿದ್ದಾರೆ.