ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಿಲೆಂಜೂರು ದೈವಸ್ಥಾನ 25ರಂದು ಬ್ರಹ್ಮಕಲಶೋತ್ಸವ

Mainashree
Updated On : 23 Jan 2013, 12:05 pm

ಮೂಲ್ಕಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರಿನ ಶ್ರೀ ಸರಳ ಧೂಮಾವತಿ ದೈವಸ್ಥಾನದಲ್ಲಿ ಸುಮಾರು ರು. 50 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು 25ರಂದು ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಡ್ತಿಮಾರುಗುತ್ತು ರಾಜೇಂದ್ರ ಕೆ. ಶೆಟ್ಟಿ ಕಿಲೆಂಜೂರಿನ ದೈವಸ್ಥಾನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 800 ವರ್ಷಗಳ ಇತಿಹಾಸವಿರುವ ದೈವಸ್ಥಾನವು ಕಟೀಲಿನಲ್ಲಿ 1944ರಲ್ಲಿ ನೆರೆ ಬಂದು ದೇವಳವು ನೀರಿನಿಂದ ಆವೃತವಾದ ಸಂದರ್ಭದಲ್ಲಿ ನೀರಿನಿಂದ ಆವೃತವಾಗಿ ಧಾರ್ಮಿಕ ಕಾರ್ಯಕ್ರಮಗಳು ನಿಂತಿತ್ತು. 1968ರಲ್ಲಿ ಮತ್ತೆ ನೇಮೋತ್ಸವವು ಆರಂಭಗೊಂಡಿದ್ದು, 1992ರಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಭಂಡಾರ ಮನೆ, ಗರ್ಭಗುಡಿ ನಿರ್ಮಾಣಗೊಂಡಿದ್ದು, ಆ ಬಳಿಕ ಹಂತ ಹಂತವಾಗಿ ಜೀರ್ಣೋದ್ಧಾರಗೊಂಡಿದ್ದು ಇದೀಗ 50 ಲಕ್ಷ ವೆಚ್ಚದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ.
ಇಂದಿನಿಂದ ವಿವಿಧ ಕಾರ್ಯಕ್ರಮ: 23ರಿಂದ 26ವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, 25ರಂದು ಬ್ರಹ್ಮಕಲಶಾಭಿಷೇಕ, 26ರಂದು ನೇಮೋತ್ಸವವು ಜರಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಡರ ಮನೆ ಪ್ರವೀಣ್‌ಮಾಡ, ಅತ್ತೂರುಗುತ್ತು ಪ್ರಸನ್ನ ಎಲ್. ಶೆಟ್ಟಿ, ಮುಂಬೈ ಸಮಿತಿ ಅಧ್ಯಕ್ಷ ಮಜಲಗುತ್ತು ಹರೀಶ್ ಜ. ಶೆಟ್ಟಿ, ಬಾಂಜಾಲ ಗುತ್ತು ವಿಶ್ವನಾಥ ಶೆಟ್ಟಿ, ನಿಶಾಂತ್ ಶೆಟ್ಟಿ ಮತ್ತಿತರರು ಕಾಮ್ಯೆತೋಟ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement