ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆ ಮಹಿಳೆಯರ ಮೌನ ನಡಿಗೆ

Mainashree
Updated On : 23 Jan 2013, 12:05 pm

ಮಂಗಳೂರು: ಲಿಂಗತ್ವ ನ್ಯಾಯ ಸ್ಥಾಪಿಸುವ ದಿಶೆಯಲ್ಲಿ ಸಮಾನ ಮನಸ್ಕ ಸಂಘಟನೆಗಳು ಸೇರಿ ಜ.24ರಂದು ಮಂಗಳೂರಿನಲ್ಲಿ ಮೌನ ಮೆರವಣಿಗೆ, ಕ್ಯಾಂಡಲ್ ಲೈಟ್ ಮತ್ತು ಸಾರ್ವಜನಿಕ ಸಭೆ ಹಮ್ಮಿಕೊಂಡಿವೆ ಎಂದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಸಂಚಲನಾ ಸಮಿತಿ ಅಧ್ಯಕ್ಷೆ ಗುಲಾಬಿ ಬಿಳಿಮಲೆ ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4.45ಕ್ಕೆ ಅಂಬೇಡ್ಕರ್ ವೃತ್ತದಿಂದ ಬಲ್ಮಠ ರಸ್ತೆ ಮೂಲಕ ಲೈಟ್‌ಹೌಸ್ ಹಿಲ್‌ನ ಲೇಡೀಸ್ ಕ್ಲಬ್‌ವರೆಗೆ ಮೌನ ಮೆರವಣಿಗೆ ನಡೆಯಲಿದೆ. ನಂತರ ಇದೇ ಮೈದಾನದಲ್ಲಿ ಕ್ಯಾಂಡಲ್ ಲೈಟ್ ವಿಜಿಲ್ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಮುಂಬೈ ಮಹಿಳಾ ಹಕ್ಕುಗಳ ನ್ಯಾಯವಾದಿ, ಮಜ್ಲಿಸ್ ಸಂಸ್ಥೆ ನಿರ್ದೇಶಕಿ ಆಗ್ನೇಸ್ ಸಭೆಯನ್ನುದ್ದೇಶಿಸಿ ಮಾತನಾಡುವರು ಎಂದರು. ಮಹಿಳಾ ದಿನಾಚರಣೆ ಪ್ರಯುಕ್ತ ಮಂಗಳೂರಲ್ಲಿ ಫೆ.6ರಿಂದ 8ರ ವರೆಗೆ ಸಮಾವೇಶ ನಡೆಯಲಿದ್ದು, ರಾಜ್ಯದ ನಾನಾ ಕಡೆಗಳಿಂದ ಮಹಿಳೆಯರು ಪಾಲ್ಗೊಳ್ಳುವರು ಎಂದರು. ವೇದಿಕೆ ಪದಾಧಿಕಾರಿಗಳಾದ ವಿದ್ಯಾ ದಿನಕರ್, ಲರೆಟ್ಟೋ ರೆಬೆಲ್ಲೋ, ದ.ಕ.ಜಿಲ್ಲಾ ಕ್ರೈಸ್ತ ಅಸೋಸಿಯೇಶನ್‌ನ ಡಾ.ಡೆರೆಕ್ ಲೋಬೋ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement