ಬಾವಿ ಹಗ್ಗ ಆಕಸ್ಮಿಕವಾಗಿ ಸುತ್ತಿ ಮಹಿಳೆ ಸಾವು
ಪಡುಬಿದ್ರಿ: ಬಾವಿಯ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ನಡ್ಸಾಲು ಗ್ರಾಮದಲ್ಲಿ ನಡೆದಿದೆ. ಮೃತರು ಭುವನೇಶ್ವರಿ(35), ಈಕೆ ಇಲ್ಲಿನ ಪಿ.ಕೆ. ಮೊಯ್ದಿನ್ ಕಾಂಪೌಂಡಿನ ನಿವಾಸಿ ಮುರುಗನ್ ಎಂಬವರ ಪತ್ನಿ.
ಜ.6ರಂದು ಮನೆಯ ಬಾವಿಯಿಂದ ನೀರನ್ನು ಎಳೆಯುತ್ತಿರುವಾಗ ಆಕಸ್ಮಿಕವಾಗಿ ಹಗ್ಗ ಕೈಯಿಂದ ಜಾರಿ ಕೊಡಪಾನ ಬಾವಿಯೊಳಗೆ ಬಿತ್ತು. ಆ ವೇಗಕ್ಕೆ ಮೇಲಕ್ಕೆ ಕಟ್ಟಲಾಗಿದ್ದ ಹಗ್ಗದ ಇನ್ನೊಂದು ತುದಿ ಅವರ ಕುತ್ತಿಗೆಗೆ ಸುತ್ತಿಕೊಂಡು ಬಿಗಿದು ಉಸಿರುಗಟ್ಟಿ ಮೂರ್ಛೆ ತಪ್ಪಿ ಬಿದ್ದುಬಿಟ್ಟರು. ತಕ್ಷಣ ಅವರನ್ನು ಸ್ಥಳೀಯ ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪತಿ ಮುರುಗನ್ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.