ಎಸ್ಸಿಡಿಸಿಸಿ ಬ್ಯಾಂಕ್ ಎಂಡಿ ಗೋಪಾಲಕೃಷ್ಣ ಭಟ್
ಮಂಗಳೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರಾಗಿ ಎಂ.ಗೋಪಾಲಕೃಷ್ಣ ಭಟ್ ಪೂರ್ಣಪ್ರಮಾಣದ ಅಧಿಕಾರ ಸ್ವೀಕರಿಸಿದ್ದಾರೆ. 1978ರಲ್ಲಿ ಪುತ್ತೂರಿನಲ್ಲಿ ಡಿಸಿಸಿ ಬ್ಯಾಂಕ್ ಕರ್ತವ್ಯಕ್ಕೆ ಸೇರ್ಪಡೆಯಾದ ಇವರು 34 ವರ್ಷ ಕಾಲ ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಪಾಣಾಜೆಗಳಲ್ಲಿ ವಿವಿಧ ಹುದ್ದೆ ನಿರ್ವಹಿಸಿದ್ದರು. 2005ರಿಂದ ಕೇಂದ್ರ ಕಚೇರಿಯಲ್ಲಿ ಎಜಿಎಂ, ಡಿಜಿಎಂ, ಜಿಎಂ ಆಗಿ ಈಗ ಎಂಡಿ ಆಗಿದ್ದಾರೆ. ಇವರು ಎಂಕಾಂನಲ್ಲಿ ಸಿಎಐಐಬಿ ಪೂರೈಸಿದ್ದಾರೆ. ಇನ್ನು ಎರಡು ವರ್ಷಕಾಲ ಎಂಡಿ ಹುದ್ದೆ ನಿರ್ವಹಿಸಲಿದ್ದಾರೆ. ಇವರು ಪುತ್ತೂರಿನ ಮಿತ್ತೂರು ನಿವಾಸಿ. ಬ್ಯಾಂಕಿನ ಜನರಲ್ ಮೆನೇಜರ್ರಾಗಿ ಉಮೇಶ ಗೌಡ(ಸಾಲ ವಿಭಾಗ)ಮತ್ತು ಬಾಬು ಬಿಲ್ಲವ(ಆಡಳಿತ)ನೇಮಕಗೊಂಡಿದ್ದಾರೆ.