ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕರ್ಣಾಟಕ ಬ್ಯಾಂಕ್: ತ್ರೈಮಾಸಿಕ ಅವಧಿಗೆ ಶೇ.72.3 ನಿವ್ವಳ ಲಾಭ

Mainashree
Updated On : 24 Jan 2013, 11:18 am

ಮಂಗಳೂರು: 2012-13ನೇ ಸಾಲಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಕರ್ಣಾಟಕ ಬ್ಯಾಂಕ್ ಶೇ.72.3 ಅಂದರೆ ರು. 280.69 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ಕಳೆದ ಸಾಲಿನ ರು. 162.91 ಕೋಟಿ ದಾಖಲೆಯನ್ನು ಹಿಂದಿಕ್ಕಿ ಪ್ರಗತಿಯಲ್ಲಿ ಮುನ್ನಡೆದಿದೆ.
 ಒಟ್ಟು ವಹಿವಾಟು ರು. 49,475 ಕೋಟಿಯಿಂದ ರು. 58,024 ಕೋಟಿಗೆ ತಲಪಿದ್ದು, ಶೇ.17.3 ಪ್ರಗತಿ ದಾಖಲಿಸಿದೆ. ಒಟ್ಟು ಠೇವಣಾತಿ ರು. 29,785 ಕೋಟಿಯಿಂದ ರು. 34,620 ಕೋಟಿಗೆ ಹೆಚ್ಚಳವಾಗಿದ್ದು, ಶೇ.16.2 ಪ್ರಗತಿ ಕಂಡಿದೆ. ಮುಂಗಡ ಮೊತ್ತದಲ್ಲೂ ರು. 19,689 ಕೋಟಿಯಿಂದ ರು. 23,404 ಕೋಟಿಗೆ ಏರಿಕೆಯಾಗಿ ಶೇ.18.9 ಹೆಚ್ಚಳ ದಾಖಲಿಸಿದೆ. 2011 ಡಿಸೆಂಬರ್‌ನಲ್ಲಿ 58 ಲಕ್ಷದಷ್ಟಿದ್ದ ಗ್ರಾಹಕರ ಸಂಖ್ಯೆ 2012 ಡಿಸೆಂಬರ್‌ಗೆ 10 ಲಕ್ಷದಷ್ಟು ಜಾಸ್ತಿಯಾಗಿದ್ದು, 68 ಲಕ್ಷಕ್ಕೆ ತಲುಪಿದೆ.
 ಉಳಿತಾಯ ಖಾತೆಯಲ್ಲೂ ಹೆಚ್ಚಳವಾಗಿದ್ದು, ರು. 7,138 ಕೋಟಿಯಿಂದ ರು. 8,114 ಕೋಟಿಗೆ ತಲಪಿದ್ದು, ಶೇ.13.7 ಸಾಧನೆಯಾಗಿದೆ. ಬ್ಯಾಂಕಿಗೆ ಡಿಸೆಂಬರ್ ಅಂತ್ಯಕ್ಕೆ ರು. 3,072 ಕೋಟಿ ಆದಾಯ ಲಭಿಸಿದ್ದು, ಕಳೆದ ವರ್ಷ ಇದರ ಪ್ರಮಾಣ ರು. 2,492 ಕೋಟಿ, ಶೇ.23.3 ಲಾಭ ಗಳಿಸಿದೆ. ಆರಂಭಿಕ ಲಾಭ ರು. 328 ಕೋಟಿಯಿಂದ ರು. 482 ಕೋಟಿಗೆ ಅಂದರೆ ಶೇ.46.9 ಏರಿಕೆಯಾಗಿದೆ. ಬಡ್ಡಿದರಲ್ಲೂ ರು. 518 ಕೋಟಿಯಿಂದ ರು. 682 ಕೋಟಿ ಶೇ.31.7 ಹೆಚ್ಚಳವಾಗಿದೆ. ಸರಾಸರಿ ನಿವ್ವಳ ಲಾಭದಲ್ಲಿ ಶೇ.2.10ರಿಂದ ಶೇ.2.36ರಷ್ಟು ಏರಿಕೆಯಾಗಿದೆ. ಶೇರು ಹೂಡಿಕೆಯಲ್ಲಿ ಶೇ.11.55ರಿಂದ ಶೇ.19.87, ಬಂಡವಾಳ ರೇಶ್ಯೂ ಪ್ರಮಾಣ ಕನಿಷ್ಠ ಶೇ.9ರಿಂದ ಶೇ.12.93ರಷ್ಟಿದೆ.
 ಕೈಗಾರಿಕಾ ವಲಯದಲ್ಲಿ ಬಂಡವಾಳ ಪ್ರಮಾಣ ಶೇ.11.1 ಹಾಗೂ ಮುಂಗಡ ಹೆಚ್ಚಳ ಶೇ.15.1 ದಾಖಲಿಸಿದೆ. 'ರಿಟೇಲ್ ಕ್ರಿಡಿಟ್ ಉತ್ಸವ' ಮತ್ತು 'ಕಾಸಾ ಅಭಿಯಾನ' ಮೂಲಕ ಸಾಮಾನ್ಯ ಸಾಲ ಪ್ರಮಾಣವನ್ನು ಶೇ.60ರಷ್ಟು ವೃದ್ಧಿಗೊಳಿಸುವ ಇರಾದೆ ಹೊಂದಿರುವುದಾಗಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಭಟ್ ತಿಳಿಸಿದ್ದಾರೆ.
 ಮಾರ್ಚ್ ಅಂತ್ಯಕ್ಕೆ ಬ್ಯಾಂಕ್ ತನ್ನ ಸೇವಾ ಕೇಂದ್ರಗಳನ್ನು 1 ಸಾವಿರದಷ್ಟು ಹೆಚ್ಚಿಸಲಿದ್ದು, 550 ಶಾಖೆ, 450 ಎಟಿಎಂ ಹೊಂದುವ ಗುರಿ ಇರಿಸಿಕೊಂಡಿದೆ. ಪ್ರಸ್ತುತ 15 ಶಾಖೆಗಳನ್ನು ತೆರೆದಿದ್ದು, 100 ಎಟಿಎಂ ಸ್ಥಾಪಿಸಿದೆ. ಅಂದರೆ ಒಟ್ಟು 518 ಶಾಖೆಗಳಿದ್ದು, 447 ಎಟಿಎಂ ಹೊಂದಿದಂತಾಗಿದೆ. ಇದಲ್ಲದೆ 15 ಹಣಕಾಸು ನಿರ್ವಹಣಾ ಶಾಖೆ ಮತ್ತು 28 ಸಣ್ಣ ಶಾಖೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement