ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂತ್ರಿ ಸ್ಥಾನ ವಂಚಿತ ಅಂಗಾರ: ಕ್ಷಮೆ ಕೋರಿದ ಈಶ್ವರಪ್ಪ

Mainashree
Updated On : 24 Jan 2013, 11:17 am

ಸುಳ್ಯ: ಸತತ ನಾಲ್ಕು ಬಾರಿ ಗೆದ್ದು ಶಾಸಕರಾದ ಎಸ್. ಅಂಗಾರರಿಗೆ ಈವರೆಗೂ ಮಂತ್ರಿ ಸ್ಥಾನ ನೀಡದಿದ್ದುದಕ್ಕಾಗಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸುಳ್ಯದ ಜನತೆಯ ಕ್ಷಮೆ ಕೋರಿದ್ದಾರೆ. ಸುಳ್ಯದಲ್ಲಿ ಮಿನಿ ವಿಧಾನಸೌಧ ಮತ್ತು ವಿವಿಧ ಅಭಿವೃದ್ಧಿಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರಂಭದಲ್ಲೇ ಈ ವಿಷಯ ಪ್ರಸ್ತಾಪಿಸಿದರು. 'ಅಂಗಾರರು ಉಳಿದ ಎಲ್ಲ ಶಾಸಕರಿಗೂ, ರಾಜಕಾರಣಿಗಳಿಗೂ ಮಾದರಿ. ಮೊದಲ ಬಾರಿ ಗೆದ್ದು ಬಂದವರೇ ನನಗೆ ಪಿಡಬ್ಲ್ಯುಡಿ ಮಂತ್ರಿ ಸ್ಥಾನವೇ ಬೇಕು ಎಂದು ಹಠ ಹಿಡಿಯುವವರಿದ್ದಾರೆ. ಆದರೆ ನಾಲ್ಕು ಬಾರಿ ಗೆದ್ದ ಅಂಗಾರರಿಗೆ ನಾವು ಏನನ್ನೂ ನೀಡಿಲ್ಲ. ನಮ್ಮಿಂದ ಲೋಪ ಆಗಿದೆ, ಅದಕ್ಕಾಗಿ ಸುಳ್ಯದ ಜನತೆಯ ಕ್ಷಮೆ ಕೋರುತ್ತೇನೆ. ಭಗವಂತನ ಆಶೀರ್ವಾದ ಇದ್ದರೆ ಅವರು ಐದನೇ ಬಾರಿ ಗೆದ್ದು ಬರಲಿ, ಮಂತ್ರಿಯಾಗಲಿ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement