ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶೆಟಲ್ ಬಸ್ ಸಮಸ್ಯೆ: ಪ್ರತಿಭಟನೆ ಎಚ್ಚರಿಕೆ

Mainashree
Updated On : 24 Jan 2013, 11:14 am

ಸುಂಟಿಕೊಪ್ಪ: ರಾಜ್ಯ ರಸ್ತೆ ಸಾರಿಗೆ ನಿಗಮದ ಮಡಿಕೇರಿ ಡಿಪೋದಿಂದ ಮಡಿಕೇರಿ- ಸುಂಟಿಕೊಪ್ಪ- ಕುಶಾಲನಗರ ನಡುವೆ ಸಂಚರಿಸುತ್ತಿರುವ ಶೆಟಲ್ ಬಸ್‌ಗಳ ಅಸಮರ್ಪಕ ಸೇವೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಕೊಡಗು ಜಿಲ್ಲಾ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಎ. ಉಸ್ಮಾನ್ ಆರೋಪಿಸಿದ್ದಾರೆ.
 ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಘದ ವತಿಯಿಂದ ಬಸ್ ಡಿಪೋಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಶಾಲೆ ಬಿಡುವ ಸಮಯದಲ್ಲಿ ಶೆಟಲ್ ಬಸ್‌ಗಳು ನಿಲುಗಡೆಗೊಂಡಿದ್ದರೂ ವಿದ್ಯಾರ್ಥಿಗಳನ್ನು ಕಂಡೊಡನೆ ಹತ್ತಿಸಿಕೊಳ್ಳದೆ ಕಾಲ್ಕೀಳುತ್ತಾರೆ. ಈ ಬಗ್ಗೆ ಡಿಪೋ ವ್ಯವಸ್ಥಾಪಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅಂಥವರಿಗೆ ಸೂಕ್ತ ಸೂಚನೆ ನೀಡಿ ಸಮಸ್ಯೆ  ಪರಿಹರಿಸದಿದ್ದರೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರನ್ನು ಸಂಘಟಿಸಿ ಮಡಿಕೇರಿ ಬಸ್ ಡಿಪೋಗೆ ಮುತ್ತಿಗೆ ಹಾಕಲಾಗುವುದು ಎಂದು ಉಸ್ಮಾನ್ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement