ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಳೆ ದ್ವೇಷ: ತಂಡದಿಂದ ವ್ಯಕ್ತಿಗೆ ಹಲ್ಲೆ

Mainashree
Updated On : 24 Jan 2013, 11:14 am

ವಿಟ್ಲ: ಬೋಳಂತೂರು ಸಮೀಪದ ಕಲ್ಪಣೆ ಎಂಬಲ್ಲಿ ಹಳೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಹತ್ತು ಜನರ ತಂಡ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮಂಗಳವಾರ ಕಲ್ಲಡ್ಕ ನಿವಾಸಿ ಆಸಿಮ್ ಎಂಬವರು ಕಲ್ಪಣೆ ಎಂಬಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಅಡ್ಡಗಟ್ಟಿದ ತಂಡ ವಿಕೆಟ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಆಸಿಮ್ ಸಧ್ಯ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾಕೂಬು, ಶಾಫಿ, ಅಬ್ದುಲ್ ರಹಿಮಾನ್ ಯಾನೆ ಅದ್ರಾಮ, ಸುಲೇಮಾನ್, ಸಿದ್ಧಿಕ್, ಅಶ್ರಪ್ ಯಾನೆ ಗೂಳಿ, ರಫಿಕ್, ಶರೀಫ್, ಹ್ಯಾರೀಸ್, ಕಬೀರ್ ಇವರನ್ನೊಳಗೊಂಡ ತಂಡ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement