ಚಿಮಿಣಿ ದೀಪ ತಗುಲಿ ಮಹಿಳೆ ಸಾವು
ಮಂಗಳೂರು: ಶೌಚಾಲಯದಲ್ಲಿ ಚಿಮಿಣಿ ದೀಪ ತಗುಲಿ ಬೆಂಕಿ ಹತ್ತಿಕೊಂಡು ಎಕ್ಕೂರು ಗೀತಾ (28) ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಕರೆಂಟ್ ಹೋದ ಹಿನ್ನೆಲೆಯಲ್ಲಿ ಚಿಮಿಣಿ ದೀಪ ತೆಗೆದುಕೊಂಡು ಶೌಚಾಲಯಕ್ಕೆ ಹೋಗಿದ್ದರು. ತಲೆಸುತ್ತು ಬಂದು ಬೀಳುನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬಿದ್ದಾಗ ಚಿಮಿಣಿ ದೀಪ ದೇಹಕ್ಕೆ ತಗುಲಿ ಗಂಭೀರ ಗಾಯಗೊಂಡರು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟರು. ಅಕ್ಕ ರಾಜೀವಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.