ನಾರಾವಿ ದೇಗುಲ ಚಿನ್ನಾಭರಣ ಕಳವು ಆರೋಪಿ ಬಂಧನ
ಮಂಗಳೂರು: ಬೆಳ್ತಂಗಡಿ ನಾರಾವಿ ಸೂರ್ಯನಾರಾಯಣ ದೇವಸ್ಥಾನ ಎದುರಿನ ಬಾಗಿಲ ಬೀಗ ಮುರಿದು 4 ಕಿಲೊ ಬೆಳ್ಳಿ ಮತ್ತು 28 ಗ್ರಾಂ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಬೈಕ್, ಬೆಳ್ಳಿ, ಚಿನ್ನಾಭರಣ, ರು. ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅಭಿಷೇಕ್ ಗೋಯಲ್ ಪ್ರಕರಣ ವಿವರ ನೀಡಿದರು. ಬಡಗಕಾರಂದೂರು ಕೆದ್ದು ಜಂಕ್ಷನ್‌ನಲ್ಲಿ ಭಾನುವಾರ ಬೈಕ್‌ನಲ್ಲಿ ಬಂದ ಆರೋಪಿ ದಾವಣಗೆರೆ ಎಸ್.ಒ.ಜಿ.ಕಾಲನಿ ನಿವಾಸಿ ಚಂದ್ರಶೇಖರಪ್ಪನನ್ನು ಬಂಧಿಸಿದರು. ಆರೋಪಿ ಕಳವು ಮಾಡಿರುವುದನ್ನು ಒಪ್ಪಿದ್ದು, ದಾವಣಗೆರೆಯ ತನ್ನ ಮನೆಯಿಂದ ಸೊತ್ತುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ದೇವರ ಪ್ರಭಾವಳಿಗೆ ಆಧಾರವಾಗಿದ್ದ ಮರದ ಸಾಮಾಗ್ರಿ ಎಸೆದುಹೋದ ಸ್ಥಳವಾದ ನಾರಾವಿ ಸೂರ್ಯನಾರಾಯಣ ದೇವಸ್ಥಾನ ಬಳಿಯ ಜಗತ್ಪಾಲ ಜೈನ್ ಅವರ ತೋಟದ ಪೊದೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಇನ್‌ಸ್ಪೆಕ್ಟರ್ ಎನ್.ಜಿ.ಭಾಸ್ಕರ ರೈ, ವೇಣೂರು ಪೊಲೀಸ್ ಠಾಣೆ ಎಸ್‌ಐ ಅಬ್ದುಲ್ ಖಾದರ್, ಎಎಸ್‌ಐ ವಾಸುದೇವ ನಾಯಕ್, ಎಎಸ್‌ಐ ಶೀನಪ್ಪ ಗೌಡ, ಸಿಬ್ಬಂದಿ ತಾರನಾಥ್, ಪ್ರವೀಣ್ ಎಂ., ಹರೀಶ, ಪ್ರಸನ್ನ ಕುಮಾರ್, ಉದಯ ಗೌಡ, ನಾಗರಾಜ, ಸತೀಶ್, ಚಾಲಕರಾದ ಬಿ.ಎನ್. ಬುಡ್ಕಿ, ಪ್ರದೀಪ್ ಸಹಕರಿಸಿದ್ದರು.