ಇಂದು ಪೌರ ಸಮಿತಿ ರಚನೆ ಸಭೆ
ಮಂಗಳೂರು: ಮಹಾನಗರ ಪಾಲಿಕೆಯ 60 ವಾರ್ಡ್ಗಳ ನಾಗರಿಕರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದು, ಈ ಬಗ್ಗೆ ಹೋರಾಟ ರೂಪಿಸಲು ಮಂಗಳೂರು ಮಹಾನಗರ ಪೌರ ಸಮಿತಿಗೆ ಸದಸ್ಯರಾಗಲು ಜ.26ರಂದು ಬಲ್ಮಠ ಸಹೋದಯದಲ್ಲಿ ಸಂಜೆ 4ಕ್ಕೆ ಸಭೆಯನ್ನು ಆಯೋಜಿಸಲಾಗಿದೆ.
ಮೂಲಭೂತ ಅವಶ್ಯಕತೆಗಳಾದ ರಸ್ತೆ, ಕಾಲುದಾರಿ, ಮಳೆ ನೀರು ಹೋಗುವ ಚರಂಡಿ, ದಾರಿದೀಪ, ಬಸ್ ನಿಲ್ದಾಣ, ರಿಕ್ಷಾ ಪಾಕಿಂಗ್, ಕ್ರೀಡಾಂಗಣ, ಉದ್ಯಾನವನ, ಈಡುಕೊಳ, ಸ್ವಚ್ಛತೆ, ಒಳಚರಂಡಿ, ನೀರು ಸರಬರಾಜು ಇತ್ಯಾದಿ ಸಮಸ್ಯೆ ಎದುರಿಸುತ್ತಿದ್ದಾರೆ.
ಈಗಾಗಲೇ ಪೌರ ಸಮಿತಿ ರಚನೆಯಾಗಿದ್ದು, 25 ಮಂದಿ ಸದಸ್ಯರಿದ್ದಾರೆ. ಇನ್ನು ಕಾರ್ಯಕಾರಿ ಮಂಡಳಿ ರಚನೆಯಾಗಲಿದೆ ಎಂದು ಪೌರ ಸಮಿತಿ ಪ್ರಮುಖರಾದ ಬಿ.ಎಸ್.ಚಂದ್ರು ತಿಳಿಸಿದ್ದಾರೆ.