ಉಜಿರೆ: ರಾಮ ಭಜನಾ ಮಂದಿರ ಅಮೃತೋತ್ಸವ
ಬೆಳ್ತಂಗಡಿ: ಉಜಿರೆ ಹಳೆಪೇಟೆ ಶ್ರೀ ರಾಮ ಭಜನಾ ಮಂದಿರದ ಅಮೃತೋತ್ಸವ ಕಾರ್ಯಕ್ರಮ ಗುರುವಾರ ಆರಂಭಗೊಂಡಿದ್ದು, 28 ರವರಗೆ ನಡೆಯಲಿದೆ.
26 ರಂದು ಬೆಳಗ್ಗೆ ಶ್ರೀ ಪಾಂದಂಗಳವರಿಂದ ದೇವರಿಗೆ ಶತಕಲಶಾಭಿಷೇಕ ನಡೆದ ಬಳಿಕ ಬಂಟ್ವಾಳದ ವರ್ಷಾ ಪ್ರಭು ಅವರಿಂದ ಭಜನಾ ಸೇವೆ ನಡೆಯಲಿದೆ. ಸಂಜೆ ಸಮಾಜ ಬಾಂಧವರಿಗೆ ಗುರುವರ್ಯರಿಂದ ಫಲ ಮಂತ್ರಾಕ್ಷತೆ ನೀಡುವ ಕಾರ್ಯಕ್ರಮವಿರುತ್ತದೆ.
27 ರಂದು ಸಂಜೆ 3 ಗಂಟೆಗೆ ಶ್ರೀಗಳವರು ಸಂತ ನಾಡೋಜ ಕೀರ್ತನ ಕೇಸರಿ ಭದ್ರಗಿರಿ ಶ್ರೀ ಅಚ್ಯುತದಾಸರನ್ನು ಸಮ್ಮಾನಿಸಲಿದ್ದಾರೆ. ಈ ಸಂದರ್ಭ ಉಪಸಭಾಪತಿ ಯೋಗೀಶ್ ಭಟ್, ಮಂಗಳೂರು ಗಣೇಶ ಬೀಡಿಯ ಮೈಸೂರಿನ ಜಗನ್ನಾಥ ಶೆಣೈ, ಭಾರತ್ಬೀಡಿ ವರ್ಕ್ಸ್ನ ಅನಂತ ಪೈ, ಚಿತ್ರಕಲಾವಿದ ವಿಲಾಸ್ ನಾಯಕ್ ಉಪಸ್ಥಿತರಿರುತ್ತಾರೆ. ಬಳಿಕ ಸತ್ಯ ಮೇವ ಜಯತೆ ಎಂಬ ನೃತ್ಯ ರೂಪಕ ನಡೆಯಲಿದೆ.
28 ರಂದು ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿ ಧನ್ವಂತರಿ ಮತ್ತು ರುದ್ರಾಭಿಷೇಕ ಸಹಿತ ಮಹಾ ಮೃತ್ಯಂಜಯ ಹವನ ನಡೆಯಲಿದೆ. 9 ಗಂಟೆಗೆ ಶ್ರೀ ಕ್ಷೇತ್ರ ಯಕ್ಷಗಾನ ಮಹಾಮಂಡಳಿಯ ಗಣಪತಿ ದೇವರಿಗೆ ವೈಭವ ಪೂರ್ಣ ಸ್ವಾಗತ ನೀಡಲಾಗುತ್ತದೆ.
ಸಂಜೆ 4.30 ಕ್ಕೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಅಮೃತೋತ್ಸವವನ್ನು ಉದ್ಘಾಟಿಸಿ ಆಶೀರ್ವದಿಸಲಿದ್ದಾರೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳ್ತೆ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ವಸಂತ ಬಂಗೇರ,ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅತಿಥಿಗಳಾಗಿರುತ್ತಾರೆ.