ಎಸ್ಕೆಎಸ್ಸೆಸ್ಸೆಫ್ನಿಂದ ಇಂದು ಮಾನವ ಸರಪಳಿ (ಸುದ್ದಿ ಸಂಕ್ಷೇಪ)
ಸುಳ್ಯ: ಎಸ್ಕೆಎಸ್ಸೆಸ್ಸೆಫ್ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನವಾದ ಜ.26ರಂದು ಮಾನವ ಸರಪಳಿ ವಿಶೇಷ ಕಾರ್ಯಕ್ರಮ ಸುಳ್ಯ ಗಾಂಧಿನಗರದಲ್ಲಿ ನಡೆಯಲಿದೆ. ಮಾನವ ಸರಪಳಿ ಸ್ವಾಗತ ಸಮಿತಿ ಅಧ್ಯಕ್ಷ ಟಿ.ಎಂ. ಶಹೀದ್, ಸಂಘಟಕ ಅಕ್ಬರ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಸಂದರ್ಭದಲ್ಲಿ ಬಶೀರ್ ಕೆ.ಎಂ, ಎಸ್. ಸಂಶುದ್ದೀನ್, ಅಬ್ದುಲ್ ಕಲಾಂ, ಅಬೂಬಕ್ಕರ್, ಸವಾದ್, ಅಬ್ದುಲ್ ರಝಾಕ್ ಕರಾವಳಿ, ಇತರರು ಇದ್ದರು.