ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೋಪಯ್ಯ ಪತ್ತೆಗೆ ಪೂಜಾರಿ ರು. 5 ಸಾವಿರ ಇನಾಮು!

Mainashree
Updated On : 26 Jan 2013, 11:55 am

ಮಂಗಳೂರು: ಸ್ಪೀಕರ್ ಬೋಪಯ್ಯ ಅವರನ್ನು ಪತ್ತೆ ಹಚ್ಚಿಕೊಡುವವರಿಗೆ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ 5 ಸಾವಿರ ಘೋಷಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿದ ಪೂಜಾರಿ, ಶುಕ್ರವಾರ 4 ಗಂಟೆ ಒಳಗೆ ಯಾರಾದರೂ ಪತ್ತೆ ಮಾಡಿಕೊಟ್ಟಲ್ಲಿ, ಸಂದರ್ಶನ ಪಡೆದಲ್ಲಿ ನಗರದ ಹಂಪನಕಟ್ಟೆ ವೃತ್ತದಲ್ಲಿ ಭಿಕ್ಷೆ ಬೇಡಿ 5 ಸಾವಿರ ಸಂಗ್ರಹಿಸಿ ನೀಡುವುದಾಗಿ ತಿಳಿಸಿದರು.
ಮುಖ್ಯಮಂತ್ರಿಗೆ ಸ್ಪೀಕರ್ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಸ್ಪೀಕರ್ ವರ್ತನೆ ನೋಡುವಾಗ ಅವರು ಗೌರವಾನ್ವಿತ ಹುದ್ದೆಗೆ ಅರ್ಹರೇ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ ಸಮರ್ಥಿಸಿದ ಪೂಜಾರಿ, ಸಂಝೋತ ಎಕ್ಸ್ಪ್ರೆಸ್ ಪ್ರಕರಣದ ಆರೋಪಿಗಳು ಜೈಲ್ನಲ್ಲಿರುವಾಗ ಬಿಜೆಪಿ ನಾಯಕರು ಭೇಟಿಯಾಗಿಲ್ಲವೇ ? ಅವರು ಸಂಝೋತ ದುರಂತವನ್ನು ಖಂಡಿಸಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಬಿಜೆಪಿ ಪ್ರಚೋದನೆಕಾರಿ ಹೇಳಿಕೆಗಳಿಂದ ಹೆದರಿಕೆ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.
ಭಿಕ್ಷೆ ರದ್ದು:  ಪೂಜಾರಿ ಗಡುವಿನ ಒಳಗೆ ಸ್ಪೀಕರ್ ಬೋಪಯ್ಯ ಪತ್ತೆಯಾಗದ ಹಿನ್ನೆಲೆಯಲ್ಲಿ 5 ಸಾವಿರ ಸಂಗ್ರಹಿಸಲು ಹಂಪನಕಟ್ಟೆಯಲ್ಲಿ ಭಿಕ್ಷೆ ಬೇಡುವ ಕಾರ್ಯವನ್ನು ಪೂಜಾರಿ ರದ್ದು ಮಾಡಿದರು.
ಆರ್ಎಸ್ಎಸ್ ಮೇಲೆ ದಾಳಿ ನಡೆಸಲು ಬಿಡೋಲ್ಲ:  ಬಿಜೆಪಿ ಮತ್ತು ಆರ್ಎಸ್ಎಸ್ ನೆಲೆಗಳ ಮೇಲೆ ದಾಳಿ ನಡೆಸುವುದಾಗಿ ಪಾಕ್ ಉಗ್ರ ಹಫೀಜ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು ಹಾಗೆಂದು ಆರ್ಎಸ್ಎಸ್, ಬಿಜೆಪಿ ಅಥವಾ ಪ್ರಜೆಗಳ ಮೇಲೆ ಯಾರಿಗೂ ದಾಳಿ ನಡೆಸಲು ಕಾಂಗ್ರೆಸ್, ದೇಶದ ಮಿಲಿಟರಿ ಬಿಡುವುದಿಲ್ಲ ಎಂದರು.
 ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ್, ಅರುಣ್ ಕುವೆಲ್ಲೊ, ಕಳ್ಳಿಗೆ ತಾರಾನಾಥ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement