ಭದ್ರತೆಗೆ ಸುಳ್ಳು ದಾಖಲೆ ನೀಡಿ ರು. 2.25 ಕೋಟಿ ಸಾಲ ಪಡೆದವರ ವಿರುದ್ಧ ಕೇಸ್
ಮಂಗಳೂರು: ಹಂಪನಕಟ್ಟೆ ಕೆ.ಎಸ್.ರಾವ್ ರಸ್ತೆಯ ಇಂಡಿಯನ್ ಬ್ಯಾಂಕ್ ನಲ್ಲಿ ಬೇರೆಯವರ ಆಸ್ತಿ ತೋರಿಸಿ 2.25 ಕೋಟಿ ಸಾಲ ಪಡೆದು ನಂಬಿಕೆ ದ್ರೋಹ ಮಾಡಿದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲದ ಭದ್ರತೆಗೆ ಆರೋಪಿಗಳಾದ ನಾರಾಯಣ ಶರ್ಮ ಮತ್ತು ಗೋಪಾಲಕೃಷ್ಣ ಭಟ್ ಚರ ಸೊತ್ತಾದ ಮೈಸೂರು ೆಳಗೊಳ ಪ್ಲ್ಯಾಟ್ ಮತ್ತು ಭಾರತ್ ಎಕ್ಸಿಮ್ ಕಂಪೆನಿಯ ಗೋದಾಮಿನ ಸೊತ್ತುಗಳನ್ನು ತೋರಿಸಿದ್ದರು. ಆದರೆ ರಿಸರ್ವ್ ಬ್ಯಾಂಕ್ ಅಧಿಕಾರಿ ಬಂದು ತಪಾಸಣೆ ನಡೆಸಿದಾಗ ಸೊತ್ತುಗಳು ಜಿ.ವಿ.ಕೆ. ವುಡ್ ಸಂಸ್ಥೆಗೆ ಸೇರಿದೆ ಎಂಬದು ಬೆಳಕಿಗೆ ಬಂದಿದೆ. ಸುಳ್ಳು ದಾಖಲೆ ನೀಡಿ ಸಾಲ ಪಡೆದ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.