ಗಂಗೊಳ್ಳಿಯಲ್ಲಿ ರಾಜ್ಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್
ಕುಂದಾಪುರ: ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಇವರ ಸಹಕಾರದೊಂದಿಗೆ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ನ 39ನೇ ವರ್ಷಾಚರಣೆ ಪ್ರಯುಕ್ತ ಫೆ.10 ರಂದು ರಾಜ್ಯಮಟ್ಟದ ಪುರುಷರ ಡಬಲ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಎಸ್.ಆರ್.ಎಸ್.ಸಿ. ಟ್ರೋಫಿ-2013 ಗಂಗೊಳ್ಳಿ ಸ.ವಿ. ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ನೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಥಮ ಸ್ಥಾನ ಪಡೆವ ತಂಡಕ್ಕೆ ರು. 8888 ನಗದು ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆವ ತಂಡಕ್ಕೆ ರು. 5555 ನಗದು ಮತ್ತು ಶಾಶ್ವತ ಫಲಕ, ತೃತೀಯ ಸ್ಥಾನ ಪಡೆವ ತಂಡಕ್ಕೆ ರು. 3333 ನಗದು, ಚತುರ್ಥ ಸ್ಥಾನ ಪಡೆವ ತಂಡಕ್ಕೆ ರು. 2222 ನಗದು ಹಾಗೂ ಕ್ವಾರ್ಟರ್ ಫೈನಲ್ ಪರಾಜಿತ ತಂಡಕ್ಕೆ ರು. 1 ಸಾವಿರ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಳಿಗಾಗಿ ಅಶ್ವಿನ್ ನಾಯಕ್ (9341035651), ನಾಗೇಶ ಪೈ (9844495891) ಅಥವಾ ಗಣೇಶ ಶೆಣೈ (9008979520) ಸಂಪರ್ಕಿಸಬಹುದು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.