ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೋಪಯ್ಯ ನಾಪತ್ತೆಗೆ ಬಿಜೆಪಿ ನಿರ್ದೇಶನವಿಲ್ಲ: ಸಿ.ಟಿ.ರವಿ

Mainashree
Updated On : 27 Jan 2013, 11:48 am

ಮಂಗಳೂರು: ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ನಾಪತ್ತೆಯಾದ ವಿಚಾರದಲ್ಲಿ ಬಿಜೆಪಿ ಯಾವುದೇ ನಿರ್ದೇಶನ ನೀಡಿಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
 ಮಂಗಳೂರಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸಾರ್ವಜನಿಕರು, ಮಾಧ್ಯಮಗಳು, ಶಾಸಕರಿಗೆ, ಸ್ಪೀಕರ್ ನಡೆಯನ್ನು ನಿರ್ದೇಶನ ಮಾಡಲು ಬರಲ್ಲ. ಪ್ರತ್ಯೊಬ್ಬರಿಗೂ ಖಾಸಗಿ ಜೀವನ ಇರುತ್ತದೆ. ಖಾಸಗಿ ಜೀವನದ ವಿವರಗಳನ್ನು ಸಾರ್ವಜನಿಕಗೊಳಿಸುವುದು ಸರಿಯಲ್ಲ. ಖಾಸಗಿ ಜೀವನವನ್ನು ಸಾರ್ವತ್ರಿಕಗೊಳಿಸಿ ಬದುಕಬೇಕೆಂಬ ನಿಯಮ ಇಲ್ಲ. ಹೀಗಾಗಿ ಅವರು ಖಾಸಗಿ ಕಾರ್ಯಕ್ರಮ ಹಮ್ಮಿಕೊಂಡು ತೆರಳಿರಬಹುದು ಎಂದರು.
 ಪ್ರಸ್ತುತ ಕೆಲವು ಸಚಿವರ ರಾಜಿನಾಮೆ ಹಿನ್ನಲೆಯಲ್ಲಿ ರಾಜ್ಯಪಾಲರ ಸಂವಿಧಾನಿಕ ಸೂಚನೆಯನ್ನು ಪಕ್ಷ ಖಂಡಿತಾ ಪಾಲಿಸುತ್ತದೆ. ಸರ್ಕಾರ 5 ವರ್ಷ ಇರಬೇಕು ಎಂಬುದು ಜನರ ಇಚ್ಛೆ. ಇದನ್ನು ವಿರೋಧಿಸುವವರು ಪ್ರಜಾಪ್ರಭುತ್ವದಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಅಂತಿಮವಾಗಿ ಇರುವ ಎರಡು ತಿಂಗಳ ಕಾಲಾವಧಿಯಲ್ಲಿ ಯಾರೂ ರಾಜಿನಾಮೆ ಕೊಟ್ಟರೂ ಒಂದೇ, ಇಲ್ಲದಿದ್ದರೂ ಒಂದೇ ಎಂದರು.
 ಏಪ್ರೀಲ್/ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿ ಎಂದರೆ ಸಾಬೀತು ಮಾಡುತ್ತೇವೆ. ಅವಿಶ್ವಾಸ ನಿರ್ಣಯ ಮಂಡಿಸಿದರೂ ಬಹುಮತ ಸಾಬೀತುಪಡಿಸುತ್ತೇವೆ ಖಂಡಿತ ಎಂದರು.
 ಬಜೆಟ್‌ಗೆ ಮುಖ್ಯಮಂತ್ರಿ ಸಿದ್ಧತೆ ನಡೆಸುತ್ತಿದ್ದಾರೆ. ದೂರದೃಷ್ಟಿ, ವರ್ತಮಾನದ ಯೋಜನೆಗಳನ್ನು ಮುಂದುವರಿಸುವುದು, ಭವಿಷ್ಯದ ಯೋಜನೆ ಮುಂದಿಟ್ಟುಕೊಂಡು ಬಜೆಟ್ ಮಂಡಿಸುತ್ತಾರೆ ಎಂದ ಸಚಿವ ರವಿ, ದೇಶದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ, ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬುದು ಎಲ್ಲ ನಾಗರಿಕರ ನಿರೀಕ್ಷೆ.
ಅವರ ಬಗ್ಗೆ ಯಾವ ಅಂಗ ಪಕ್ಷಗಳೂ ವಿರೋಧ ವ್ಯಕ್ತಪಡಿಸಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗುವ ವೇಳೆಯೂ ಅಪಸ್ವರ ಕೇಳಿಬಂದಿತ್ತು. ಮೋದಿ ಜನಮಾನಸದ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement