ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರು- ಮಡಗಾಂವ್ ರೈಲು ನಂದಿಕೂರಲ್ಲಿ ನಿಲುಗಡೆ ಆರಂಭ, ಸಂಭ್ರಮಾಚರಣೆ

Mainashree
Updated On : 27 Jan 2013, 11:48 am

ಪಡುಬಿದ್ರಿ: ಇಲ್ಲಿನ ನಂದಿಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈಲ್ವೇ ನಿಲ್ದಾಣದಲ್ಲಿ ಶನಿವಾರದಿಂದ ಮಂಗಳೂರು- ಮಡಗಾಂವ್ ರೈಲು ನಿಲುಗಡೆಗೆ ಹಸಿರು ನಿಶಾನೆ ದೊರಕಿದೆ.
ಶನಿವಾರ ಬೆಳಗ್ಗೆ ಕಾಪು ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಸೇರಿ ರೈಲನ್ನು ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ನಂದಿಕೂರು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಭಾರಿ ಬೇಡಿಕೆ ಇದ್ದ ಕಾರಣ ಹಲವು ಸಮಯಗಳಿಂದ ರೈಲು ನಿಲುಗಡೆಗೆ ಹೋರಾಟ ನಡೆದಿತ್ತು. ಈ ನಿಲ್ದಾಣದಲ್ಲಿ ಶನಿವಾರ ಮಂಗಳೂರು- ಮಡಗಾಂವ್ ರೈಲು ನಿಲುಗಡೆಯಾಗುವ ಮೂಲಕ ಈಗ ಹೋರಾಟಕ್ಕೆ ಜಯ ಸಿಕ್ಕಿದೆ. ಮುಂದಿನ ದಿನದಲ್ಲಿ ಮತ್ಸ್ಯಗಂಧ ಹಾಗೂ ಇತರ ರೈಲು ನಿಲುಗಡೆಗೆ ಪ್ರಯತ್ನಿಸಲಾಗುವುದು. ರೈಲು ನಿಲ್ದಾಣಕ್ಕೆ ಬರುವ ರಸ್ತೆಯನ್ನು ಸುಸ್ಥಿತಿಯಲ್ಲಿಡಲಾಗುವುದು ಎಂದು ಶಾಸಕರು ಈ ಸಂದರ್ಭ ಹೇಳಿದರು.
ಮಂಗಳೂರು- ಮಡಗಾಂವ್ ಪ್ಯಾಸೆಂಜರ್ ರೈಲು ಬೆಳಗ್ಗೆ 7.27ಕ್ಕೆ, ಸಂಜೆ ಮಡಗಾಂವ್- ಮಂಗಳೂರು ರೈಲು 6.48ಕ್ಕೆ ಆಗಮಿಸಲಿದೆ, ತಲಾ 1 ನಿಮಿಷಗಳ ನಿಲುಗಡೆ ಇರುತ್ತದೆ ಎಂದು ಎಂದು ರೈಲು ಯಾತ್ರಿಕರ ಸಂಘದ ಸದಸ್ಯ ದೀಪಕ್ ಕಾಮತ್  ಹೇಳಿದರು. ಫಲಿಮಾರು ಗ್ರಾಪಂ ಅಧ್ಯಕ್ಷ ಗಿರಿಯಪ್ಪ ಪೂಜಾರಿ, ಮಾಜಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಮಧುಕರ ಸುವರ್ಣ, ಜಿತೇಂದ್ರ ಪುರ್ಟಾಡೋ, ಅನಂತರಾಜ್ ಪ್ರಭು, ಉಡುಪಿ ಎಪಿಎಂಸಿ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಸ್ಟೇಷನ್ ಮಾಸ್ಟರ್ ಡಿ.ವಿ. ಸುರೇಶ್, ನೀಲೇಶ್ ಪಲಿಮಾರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement