ಕುಂ.ವೀ, ಹಂಸಲೇಖ ಸೇರಿ 9 ಜನಕ್ಕೆ ಸಂದೇಶ ಪ್ರಶಸ್ತಿ ಪ್ರದಾನ
ಮಂಗಳೂರು: ಮಂಗಳೂರಿನ ಸಂದೇಶ ಪ್ರತಿಷ್ಠಾನ ಆಶ್ರಯದಲ್ಲಿ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ಪತ್ರಕರ್ತ ಅರ್ಜುನದೇವ ಸಹಿತ 9 ಮಂದಿಗೆ ಪ್ರತಿಷ್ಠಿತ 'ಸಂದೇಶ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಪ್ರತಿಷ್ಠಾನ ಅಧ್ಯಕ್ಷ, ಬಳ್ಳಾರಿ ಧರ್ಮಪ್ರಾಂತ್ಯ ಅಧ್ಯಕ್ಷ ಡಾ.ಹೆನ್ರಿ ಡಿಸೋಜ, ನಿರ್ದೇಶಕ ಫಾ.ವಿಕ್ಟರ್ ವಿಜಯ ಲೋಬೋ, ಪ್ರಾಂಶುಪಾಲ ಫಾ.ಜಯಪ್ರಕಾಶ್ ಡಿಸೋಜ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನೆರವೇರಿಸಲಾಯಿತು. ಪ್ರಶಸ್ತಿಯು ತಲಾ ರು. 10 ಸಾವಿರ ನಗದು, ಸ್ಮರಣಿಕೆ, ಮಾನಪತ್ರವನ್ನು ಒಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರು: ಕುಂ.ವೀರಭದ್ರಪ್ಪ(ಕನ್ನಡ ಸಾಹಿತ್ಯ), ಲಿಯೋ ಜೋನ್ ಡಿಸೋಜ(ಕೊಂಕಣಿ ಸಾಹಿತ್ಯ), ವಿಜಯ ಕುಮಾರ್ ಕೊಡಿಯಾಲಬೈಲ್ (ತುಳು ಸಾಹಿತ್ಯ), ಜಯಲಕ್ಷ್ಮೀ ಆಳ್ವ (ಕಲಾ), ಅರ್ಜುನದೇವ (ಪತ್ರಿಕೋದ್ಯಮ), ಹಂಸಲೇಖ (ಸಿನಿಮಾ/ಟಿವಿ), ಡಾ.ಕೆ.ಈ.ರಾಧಾಕೃಷ್ಣ (ಅತ್ಯುತ್ತಮ ಶಿಕ್ಷಕ), ಯು.ಸಿ.ಪೌಲೋಸ್ (ವಿಶೇಷ ಗೌರವ) ಹಾಗೂ ಫಾ.ವಲೇರಿಯನ್ ಮೆಂಡೋನ್ಸಾ (ಕೊಂಕಣಿ ಸಂಗೀತ)ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಸಾಹಿತಿ ಕುಂ.ವೀರಭದ್ರಪ್ಪ, ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖ, ತುಳು ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ಮಾತನಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.