ಬ್ಯಾರಿ ಅಕಾಡೆಮಿ ಅಧ್ಯಕ್ಷ ವಜಾ ಆಗ್ರಹಿಸಿ ನಿರ್ಣಯ
ಸುಳ್ಯ: ಕೇಂದ್ರ ಸರ್ಕಾರದ ಪ್ರಸ್ತಾವಿತ ವಿಶ್ವ ವಿದ್ಯಾಲಯವು ಟಿಪ್ಪು ಸುಲ್ತಾನ್ ಹೆಸರಿನಲ್ಲಿಯೇ ಸ್ಥಾಪಿತವಾಗಬೇಕು ಮತ್ತು ಅದರಲ್ಲಿ ಅಲ್ಪಸಂಖ್ಯಾತರಿಗೆ ಶೇ. 50 ಮೀಸಲು ಖಚಿತ ಪಡಿಸಬೇಕು ಎಂದು ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಕೆ.ಎಸ್.ಎಸ್.ಎಫ್.) ಮಾನವ ಸರಪಳಿ ಮಹಾ ಸಂಗಮವು ನಿರ್ಣಯ ಕೈಗೊಂಡಿದೆ. ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸುಳ್ಯದಲ್ಲಿ ಶನಿವಾರ ನಡೆದ ಮಾನವ ಸರಪಳಿ ಮಹಾ ಸಂಗಮ ಸಮಾವೇಶದಲ್ಲಿ, ರಾಜ್ಯದ ಬ್ಯಾರಿ ಸಮುದಾಯದ ನಾನಾ ತರಹದ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕಾದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಪಕ್ಷಪಾತ ಧೋರಣೆಗೆ ಹಾಗೂ ಸ್ಥಾಪಿತ ಹಿತಾಸಕ್ತಿಗೆ ಬಲಿಯಾಗಿ ನಿಷ್ಕ್ರಿಯವಾಗಿರುವ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು.
ರಾಜ್ಯದ ಕಾರಾಗೃಹದಲ್ಲಿರುವ ನಾಸಿರ್ ಮದನಿಗೆ ಸರ್ಕಾರ ಎಲ್ಲ ರೀತಿಯ ಚಿಕಿತ್ಸೆಗಳ ಸೌಕರ್ಯ ನೀಡಬೇಕು ಮತ್ತು ಅವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯಗಳನ್ನು ಕೈಗೊಳ್ಳಲಾಯಿತು.