ರಸಪ್ರಶ್ನೆ ಸ್ಪರ್ಧೆ: ಜ್ಞಾನಜ್ಯೋತಿ ಶಾಲೆ ತಂಡಕ್ಕೆ ಪ್ರಶಸ್ತಿ
ನಾಪೋಕ್ಲು: ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಮಡಿಕೇರಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೂರ್ನಾಡಿನ ಜ್ಞಾನಜ್ಯೋತಿ ಶಾಲಾ ವಿದ್ಯಾರ್ಥಿ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಮೂರ್ನಾಡು ಜ್ಞಾನ ಜ್ಯೋತಿ ಶಾಲೆ ವಿದ್ಯಾರ್ಥಿಗಳಾದ ಎಂ.ಪಿ. ದೀಪ್ತಿ, ಡಬ್ಲ್ಯೂ.ಎನ್. ಲಕ್ಷಿತಾ, ಪಿ.ಆರ್. ರುಶಾಲ್ ಪ್ರಶಸ್ತಿ ಪಡೆದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಮೂರ್ನಾಡು ಪ್ರೌಢಶಾಲೆಯ ನ್ಯಾನ್ಸಿ ಎನ್.ಎಂ., ಸಿಮ್ಲಾ ಜಿ, ಕೆ.ಎಲ್. ಸುಜಾತ ಮುತ್ತಣ್ಣ ದ್ವಿತೀಯ ಸ್ಥಾನ ಪಡೆದುಕೊಂಡರೆ, ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಮೃತಾ ಗಿರೀಶ್, ಎಂ.ಎಸ್. ಬೆಳ್ಯಪ್ಪ, ಮೋಹಿತ್ ನಂಜಪ್ಪ ತಂಡ ತೃತೀಯ ಸ್ಥಾನ ಗಳಿಸಿತು.
ಹಿರಿಯ ಎಂಜಿನಿಯರ್ ಲತೇಶ್ ಕುಮಾರ್ ರಸಪ್ರಶ್ನೆ ನಡೆಸಿಕೊಟ್ಟರು. ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಕೆ. ಕಾರ್ಯಪ್ಪ ಹೆಸರಿನ ಟ್ರೋಫಿಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರೊ. ಬಿದ್ದಾಟಂಡ ಪೊನ್ನಪ್ಪ ವಿತರಿಸಿದರು.
ಶಾಲೆಯ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ ಮತ್ತು ಶಿಕ್ಷಕ ವರ್ಗ ಸಮಾರಂಭದಲ್ಲಿ ಹಾಜರಿದ್ದರು.