ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಭೂಕುಸಿತ: ಕಾರ್ಮಿಕ ಸಾವು

Parashurama
Updated On : 29 Jan 2013, 1:34 am

ಬಂಟ್ವಾಳ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಉಂಟಾದ ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿ ಕೂಲಿ ಕಾರ್ಮಿಕ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಸೋಮವಾರ ಬಿ.ಸಿ. ರೋಡ್‌ನಲ್ಲಿ ನಡೆದಿದೆ.
ಕಕ್ಕೆಪದವು ನಿವಾಸಿ ರಾಮಣ್ಣ ಪೂಜಾರಿ ಎಂಬವರ ಪುತ್ರ ಶರತ್ (22) ಮೃತಪಟ್ಟವನು. ಬಿ.ಸಿ. ರೋಡ್‌ನ ಚಂಡಿಕಾ ಪರಮೇಶ್ವರಿ ದೇವಸ್ಥಾನ ಮುಂಭಾಗ ನಿರ್ಮಾಣಗೊಳ್ಳುತ್ತಿರುವ ಸಭಾಭವನ ಕಾಮಗಾರಿ ಸ್ಥಳದಲ್ಲಿ ಈ ಅವಘಡ ಸಂಭವಿಸಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದೇ ಅವಘಟಕ್ಕೆ ಕಾರಣ ಎನ್ನಲಾಗಿದೆ.
ಐವರು ಕಾರ್ಮಿಕರು ಕುಸಿತದ ಭೀತಿಯಲ್ಲಿರುವ ಚಂಡಿಕಾ ಪರಮೇಶ್ವರಿ ದೇವಸ್ಥಾನ ಆವರಣಕ್ಕೆ ತಡೆಗೋಡೆ ನಿರ್ಮಿಸುವ ಕಾಮಗಾರಿಯಲ್ಲಿ ತೊಂಡಗಿಕೊಂಡಿದ್ದರು. ತಡೆಗೋಡೆಗೆ ಪಿಲ್ಲರ್ ಹಾಕುವ ಕಾರ್ಯ ಹಾಗೂ ಕಾಂಕ್ರಿಟ್ ಉದ್ದೇಶಕ್ಕಾಗಿ ಹಲಗೆ ಬಡಿಯುತ್ತಿದ್ದ ವೇಳೆ ಹಠಾತ್ತನೆ ಬರೆ ಕುಸಿದು ಶರತ್ ಮಣ್ಣಿನಡಿ ಹೂತುಹೋಗಿದ್ದಾನೆ. ಅಗ್ನಿಶಾಮಕದಳ, ಬಂಟ್ವಾಳ ಪೊಲೀಸರು ಹಾಗೂ ನಾಗರಿಕರು ಸುಮಾರು ಒಂದು ಗಂಟೆ ಕಾಲ ನಿರಂತರ ಶ್ರಮವಹಿಸಿ ಶರತ್‌ನನ್ನು ಮಣ್ಣಿನೆಡೆಯಿಂದ ಹೊರಗೆಳೆದರಾದರೂ ಆ ವೇಳೆಗಾಗಲೇ ಶರತ್ ಮೃತಪಟ್ಟಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments