ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮನಸೆಳೆದ ವಿಟ್ಲೋತ್ಸವ

Lingaraj Badiger
Updated On : 29 Jan 2013, 12:04 pm

ವಿಟ್ಲ: ವಿಟ್ಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಪ್ರತಿವರ್ಷದಂತೆ ರಮಾನಾಥ ವಿಟ್ಲ ಸಾರಥ್ಯದ ವಿಆರ್‌ಸಿ ವಿಟ್ಲ ಪ್ರಯೋಜಕತ್ವದ ರಾಜೇಶ್ ಬಳಗದಿಂದ 'ವಿಟ್ಲೋತ್ಸವ-2013' ಎಂಬ ಸಂಗೀತ ರಸಮಂಜರಿ ಕಾರ್ಯಕ್ರಮ ವಿಟ್ಲ ದೇಗುಲದ ರಥಗದ್ದೆಯಲ್ಲಿ ಭಾನುವಾರ ರಾತ್ರಿ ನಡೆಯಿತು.
ಸಾವಿರಾರು ಪೇಕ್ಷಕರ ಸಮ್ಮಖದಲ್ಲಿ ಕನ್ನಡ ಚಲನಚಿತ್ರ ತಾರೆಯರು ತಮ್ಮ ಪ್ರತಿಭೆ ಮೆರೆದರು. ಚಲನಚಿತ್ರ ಹಾಡುಗಾರರಾದ ಹೇಮಂತ್, ಅನುರಾಧ ಭಟ್, ಸಂತೋಷ್ ಹಾಡಿನ ಮೂಲಕ ಪೇಕ್ಷಕರ ಮನೆಗೆದ್ದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು ವಹಿಸಿದ್ದರು. ಗಡಿ ಭದ್ರತಾ ಸೇನೆ ನಿವೃತ್ತ ಅಧಿಕಾರಿ ಚಂದಪ್ಪ ಮೂಲ್ಯ, ವಿಆರ್‌ಸಿ ಮುಖಂಡ ರಮಾನಾಥ ವಿಟ್ಲ, ನ್ಯಾಯವಾದಿ ನಟೇಶ್ ವಿಟ್ಲ ಮೊದಲಾದವರು ಇದ್ದರು. ಸಮಾರಂಭದಲ್ಲಿ ವಿಟ್ಲ ಆಸುಪಾಸಿನ 23 ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement