ಯಕ್ಷಗಾನ ಸಪ್ತಾಹ ಪೂರ್ವಭಾವಿ ಸಭೆ
ಬಂಟ್ವಾಳ: ಎಡನೀರು ಶ್ರೀ ಕೇಶವಾನಂದ ಭಾರತೀ ತೀರ್ಥ ಶ್ರೀ ಪಾದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ವತಿಯಿಂದ ಮಾ.5 ರಿಂದ 11ರ ವರೆಗೆ ಬಿ.ಸಿ.ರೋಡ್ ಪದ್ಮನಾಭ ನಗರದಲ್ಲಿ ನಡೆಯಲಿರುವ 'ಯಕ್ಷಗಾನ ಸಪ್ತಾಹ' ಪೂರ್ವಭಾವಿ ಸಭೆ ಶಾಸಕ ಬಿ,ರಮಾನಾಥ ರೈ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಯಕ್ಷಗಾನ ಕರಾವಳಿಯ ಜೀವನಾಡಿಯಾಗಿದ್ದು ಕಾರ್ಯಕ್ರಮದ ಯಶಸ್ಸಿಗೆ ತಾಲೂಕಿನ ಎಲ್ಲಾ ವರ್ಗದ ಜನರು ಶ್ರಮಿಸಬೇಕು ಎಂದು ಶಾಸಕ ವಿನಂತಿಸಿದರು.
ಯಕ್ಷಗಾನ ಸಪ್ತಾಹ ಸಮಿತಿ ತಾಲೂಕು ಸಂಚಾಲಕ ಕೈಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ , ಪ್ರಧಾನ ಕಾರ್ಯದರ್ಶಿ ಬಿ. ತಮ್ಮಯ್ಯ , ಎನ್.ಶಿವಶಂಕರ್, ಕಾರ್ಯದರ್ಶಿ ಡಿ.ಎಂ.ಕುಲಾಲ್, ಸಹ ಸಂಚಾಲಕ ಬಿ. ಸತೀಶ್ ರಾವ್ , ಪ್ರಮುಖರಾದ ದಯಾನಂದ್ ಕೆ. ಬೆಳ್ಳೂರು, ಪ್ರಭಾಕರ ಪೈ, ಪರಮೇಶ್ವರ ಐತಾಳ್, ಮಂಜು ವಿಟ್ಲ, ಪಿ.ರಘುಪತಿ ಶಾಸ್ತ್ರಿ , ಗಣೇಶ್ ಹೊಳ್ಳ , ಜಗದೀಶ್ ಹೊಳ್ಳ ಮೊದಲಾದವರು ಇದ್ದರು. ಎನ್. ಶಿವಶಂಕರ್ ವಂದಿಸಿದರು.
ಪಂಜ ದೇವಸ್ಥಾನ ಜಾತ್ರಾ ಮಹೋತ್ಸವ ಆರಂಭ
ಸುಬ್ರಹ್ಮಣ್ಯ: ಪಂಜ ಸೀಮೆಯ ಶ್ರೀಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರಾಮಹೋತ್ಸವ ಆರಂಭವಾಗಿದ್ದು, ಜ.29ರಂದು ಬ್ರಹ್ಮಕಲಶ ವಾರ್ಷಿಕೋತ್ಸವ, ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಫೆ.1ರಂದು ಧ್ವಜಾರೋಹಣ, 2ರಂದು ನಿತ್ಯಬಲಿ, ಫೆ.3ರಂದು ಹಗಲು ನಿತ್ಯ ಬಲಿ, ಉಗ್ರಾಣ ತುಂಬಿಸುವುದು, ನಡೆಯಲಿದೆ. 4ರಂದು ಹಗಲು ಬೈಗಿನ ಬಲಿ, ರಾತ್ರಿ ಉತ್ಸವ, 5ರಂದು ಹಗಲು ದರ್ಶನ ಬಲಿ, ರಾತ್ರಿ ದೀಪೋತ್ಸವ, 6ರಂದು ರಾತ್ರಿ ಬ್ರಹ್ಮರಥೋತ್ಸವ ಜರುಗಲಿದೆ.