ಎನ್‌ಎಂಪಿಟಿ: ಗುರಿ ಮೀರಿ ಸರಕು ನಿರ್ವಹಣೆ
ಮಂಗಳೂರು: ನವಮಂಗಳೂರು ಬಂದರು(ಎನ್‌ಎಂಪಿಟಿ)2012-13ನೇ ಸಾಲಿನಲ್ಲಿ ನಿಗದಿತ 30 ಮಿಲಿಯನ್ ಟನ್ ಸರಕು ಬದಲು 30.8 ಮಿಲಿಯನ್ ಟನ್ ಸರಕು ನಿರ್ವಹಿಸಿ ಕಳೆದ ವರ್ಷಕ್ಕಿಂತ(26.6 ಮಿ.ಟ.)ಶೇ.13.8 ಪ್ರಗತಿ ಸಾಧಿಸಿದೆ.
ಈ ಮೂಲಕ ವರ್ಷದ ಗುರಿ 30 ಮಿಲಿಯನ್ ಟನ್‌ನ್ನು ಜನವರಿ ವೇಳೆಗೇ ಮೀರಿ ಸಾಧನೆ ತೋರಿಸಿದೆ. 37,759 ಟನ್ ವಿವಿಧ ಕಂಟೈನರ್ ಸರಕು ನಿರ್ವಹಿಸಿದ್ದು, ಶೇ.3.75 ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ ಕಲ್ಲಿದ್ದಲು, ಆಯಿಲ್, ಎಂಆರ್‌ಪಿಎಲ್ ಉತ್ಪನ್ನಗಳು ಸೇರಿವೆ ಎಂದು ಅಧ್ಯಕ್ಷ ತಮಿಳ್‌ವಾಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.