ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಂಚನ ಸಂಜೀವ ರೈ, ಉದ್ಯಾವರ ಜಯಕುಮಾರ್‌ಗೆ ಯಕ್ಷ ಸಹಾಯ ನಿಧಿ

Lingaraj Badiger
Updated On : 30 Jan 2013, 11:23 am

ಮಂಗಳೂರು: ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ದಿ.ಅಳಿಕೆ ರಾಮಯ್ಯ ರೈ ಸ್ಮರಣಾರ್ಥ ನೀಡಲಾಗುವ ಯಕ್ಷ ಸಹಾಯ ನಿಧಿಯನ್ನು ಹಿರಿಯ ಯಕ್ಷಗಾನ ಕಲಾವಿದ ಕಾಂಚನ ಸಂಜೀವ ರೈ ಮತ್ತು ಪ್ರಸಿದ್ಧ ಸ್ತ್ರೀ ವೇಷಧಾರಿ ಉದ್ಯಾವರ ಜಯಕುಮಾರ್‌ಗೆ ನೀಡಲಾಗುವುದು ಎಂದು ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ತಿಳಿಸಿದ್ದಾರೆ.
ಸಹಾಯ ನಿಧಿಯು ತಲಾ ರು. 10 ಸಾವಿರ ನಗದು, ಸಂಮಾನ ಫಲಕವನ್ನು ಒಳಗೊಂಡಿದೆ.
  ಫೆ.1ರಂದು ಟ್ರಸ್ಟ್ ಪದಾಧಿಕಾರಿಗಳು ಅನಾರೋಗ್ಯದಲ್ಲಿರುವ ಕಾಂಚನ ಸಂಜೀವ ರೈ ಮತ್ತು ಉದ್ಯಾವರ ಜಯಕುಮಾರ್ ನಿವಾಸಕ್ಕೆ ತೆರಳಿ ನಗದು, ಫಲಕ ನೀಡಿ ಸನ್ಮಾನಿಸುವರು ಎಂದು ಟ್ರಸ್ಟ್ ಸಲಹೆಗಾರ ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement