ಕಾರ್ಪ್ ಬ್ಯಾಂಕ್ ಇಡಿ ಬಿಭಾಸ್ ಕುಮಾರ್
ಮಂಗಳೂರು: ಕಾರ್ಪೊರೇಷನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಿಭಾಸ್ ಕುಮಾರ್ ಶ್ರೀವಾಸ್ತವ ಅಧಿಕಾರ ಸ್ವೀಕರಿಸಿದ್ದಾರೆ. ಅಲಹಾಬಾದ್ ಬ್ಯಾಂಕ್‌ನ ಕೋಲ್ಕತ್ತಾ ಕೇಂದ್ರ ಕಚೇರಿಯಲ್ಲಿ ಜನರಲ್ ಮೆನೇಜರರ್‌ರಾಗಿದ್ದ ಇವರು ಆದ್ಯತಾ ವಲಯ ಮತ್ತು ಹಣಕಾಸು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 1979ರಲ್ಲಿ ಅಲಹಾಬಾದ್ ಬ್ಯಾಂಕ್‌ಗೆ ಸೇರ್ಪಡೆಯಾದ ಇವರು ಬ್ಯಾಂಕಿನ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಉತ್ತರ ಪ್ರದೇಶ, ಮಿರ್ಜಾಪುರ, ಮುಂಬಯಿ, ಜೈಪುರ, ರಾಜಸ್ತಾನ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ 33 ವರ್ಷಗಳ ಸೇವಾನುಭವ ಹೊಂದಿದ್ದಾರೆ.