ದ.ಕ: ಅಡಕೆ ಬೆಳೆಗಾರರಿಗೆ ಸಹಾಯಧನ, ಫೆ.7 ಕೊನೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ 2012-13ನೇ ಸಾಲಿಗೆ ಅಡಕೆ ಬೆಳೆಗಾರರಿಗೆ ಬೇರು ಹುಳ ಬಾಧಿತ ತೋಟಗಳ ಪುನಃಶ್ಚೇತನಕ್ಕೆ ತೋಟಗಾರಿಕೆ ಯೋಜನೆಯಡಿ ಶೇ.50 ಸಹಾಯ ಒದಗಿಸುವ ಕಾರ್ಯಕ್ರಮ ವಿಸ್ತರಿಸಲಾಗಿದೆ. 1 ಹೆಕ್ಟೇರ್ಗೆ(2.50 ಎಕರೆ) 7500ರಂತೆ ಸಹಾಯಧನ ನೀಡಲಾಗುವುದು. ಫಲಾನುಭವಿಗಳು ಫೆ.7ರೊಳಗೆ ತಮ್ಮ ತೋಟಗಳಿಗೆ ಬಳಸಲು ಖರೀದಿಸಿದ ಪೀಡೆನಾಶಕ, ರಸಗೊಬ್ಬರ, ಹಿಂಡಿಗಳು, ಸೂಕ್ಷ್ಮಪೋಷಕಾಂಶ ಖರೀದಿ ಬಿಲ್ಲುಗಳೊಂದಿಗೆ ಆಯಾ ತಾಲೂಕು ಕಚೇರಿಗಳಲ್ಲಿ ಅರ್ಜಿ ನೀಡಬಹುದು. ಜಿಲ್ಲೆಗೆ ಲಭ್ಯ ರು. 50 ಲಕ್ಷ ಅನುದಾನದಲ್ಲಿ ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು. ವಿವರಕ್ಕೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂದೂರು ಕ್ರಾಸ್ ಮಂಗಳೂರು(ದೂ.0824-2423628)ಅಥವಾ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು.