ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿಟ್ಲ ಜಾತ್ರೆ; ಮಹಾರಥೋತ್ಸವ ಸಂಭ್ರಮ

Lingaraj Badiger
Updated On : 30 Jan 2013, 11:18 am

ವಿಟ್ಲ: ಇಲ್ಲಿಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಮಧ್ಯಾಹ್ನ ದೇವರ ದರ್ಶನ ಬಲಿ, ಕಟ್ಟೆ ಪೂಜೆ ಕಾರ್ಯಗಳು ವಿಧಿ ವಿಧಾನಗಳು ನಡೆದವು.
ರಾತ್ರಿ ರಥೋತ್ಸವ ಬಳಿಕ ರಥ ಗದ್ದೆಯ ಕಟ್ಟೆಯಲ್ಲಿ ಪೂಜೆ, ಅಲ್ಲಿಂದ ಬೊಬ್ಬೆಕ್ಕೇರಿಯಲ್ಲಿ ಪೂಜೆ ನೆರವೇರಿಸಿ ಬಳಿಕ ವಿಟ್ಲ ಪೇಟೆಯ ಮೂಲಕ ಬೀದಿಮೆರವಣಿಗೆಯಲ್ಲಿ ಬಾಕಿ ಮಾರುಗದ್ದೆಗೆ ತೆರಳಿ ಅಲ್ಲಿ ಪೂಜೆ ಸ್ವೀಕಾರ ಮಾಡಿ ಅಪ್ಪರಿಪಾದೆಯವರೆಗೆ ಸಾಗಿ ಕಟ್ಟೆ ಪೂಜೆ ನೆರವೇರಿಸಲಾಯಿತು.
ಸುಮಾರು ರು. ಎರಡು ಲಕ್ಷ ವೆಚ್ಚದ ಸಿಡಿಮದ್ದು ಪ್ರದರ್ಶನ ನಡೆಯಿತು. ರಥೋತ್ಸವ ಸಂದರ್ಭ ವಿಟ್ಲ ಅರಮನೆ ಮೊಕ್ತೇಸರ ಜನಾರ್ದನ ವರ್ಮ ಅರಸರು ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement