ಕೆಫೆ ಮೇಲೆ ದಾಳಿ: 4 ಯುವತಿ, 3 ಯುವಕರು ಪೊಲೀಸ್ ವಶಕ್ಕೆ
ಮಂಗಳೂರು: ಅತ್ತಾವರ 'ಈಜಿಡೇ ರಾಕ್ಸ್' ಕಾಫಿ ಕೆಫೆಗೆ ಪೊಲೀಸ್ ಜತೆಯಲ್ಲಿ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಪಾಂಡೇಶ್ವರ ಪೊಲೀಸರು ನಾಲ್ವರು ಯುವತಿಯರು ಹಾಗೂ ಮೂವರು ಯುವಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. 'ನೆಲಮಹಡಿಯಲ್ಲಿ ಅಶ್ರಫ್ ಎಂಬುವರಿಗೆ ಸೇರಿದ ಕಾಫಿ ಕೆಫೆ ಇದೆ. ಮೇಲಂತಸ್ತಿನಲ್ಲಿ ಮಬ್ಬುಬೆಳಕಿನಲ್ಲಿ ಹಾಡು ಕೇಳಿಬರುತ್ತಿದ್ದು, ಅಲ್ಲಿ ಯುವಕ ಯುವತಿಯರಿದ್ದರು. ಅಲ್ಲಿ ಅನೈತಿಕ ಚಟುವಟಿಕೆ ನಡೆಸುವುದು ಕಾಣುತ್ತದೆ ಎಂಬ ಸ್ಥಳೀಯರ ದೂರಿಗಾಗಿ ದಾಳಿ ನಡೆಸಲಾಗಿದೆ' ಎಂದು ಬಜರಂಗದಳ ಮಾಧ್ಯಮ ವಕ್ತಾರ ಪುನೀತ್ ಪಂಪ್ವೆಲ್ ತಿಳಿಸಿದ್ದಾರೆ. ಪೊಲೀಸರು ಪಿ.ಸಿ.ಆರ್.ವಾಹನದಲ್ಲಿ ಏಳು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ. ಸ್ಥಳದಲ್ಲಿ ಗಲಾಟೆ ಆಗುವ ಸಾಧ್ಯತೆ ಇದ್ದ ಕಾರಣ ರಕ್ಷಣೆಗಾಗಿ ಕೆಫೆಗೆ ಐಸ್ಕ್ರೀಂ ತಿನ್ನಲು ಬಂದ ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆ ತಂದು ಮನೆಗೆ ಬಿಡುತ್ತೇವೆಂದು ಎಸಿಪಿ ಜಗನ್ನಾಥ್ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.