ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಫೆ.2ರಂದು ನವೋದಯ ಸಮವಸ್ತ್ರ ವಿತರಣೆ

Lingaraj Badiger
Updated On : 31 Jan 2013, 11:13 am

ಮಂಗಳೂರು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನಿಂದ ನವೋದಯ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ಫೆ.2ರಂದು ಕುಂದಾಪುರದ ಹೆಮ್ಮಾಡಿಯಲ್ಲಿ ನಡೆಯಲಿದೆ. ಸಂಜೆ 3ಕ್ಕೆ ಹೆಮ್ಮಾಡಿ ಜಯಶ್ರೀ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಹಟ್ಟಿಯಂಗಡಿ ಧರ್ಮದರ್ಶಿ ವೇ.ಮೂ.ರಾಮಚಂದ್ರ ಭಟ್ ಸಮವಸ್ತ್ರ ವಿತರಿಸುವರು. ಆಲ್ ಬದ್ರಿಯಾ ಜುಮ್ಮಾ ಮಸೀದಿ ಖತೀಬ ಬಿ.ಎ.ಇಸ್ಮಾಯಿಲ್ ಮದನಿ ಅತಿಥಿಯಾಗಿ ಭಾಗವಹಿಸುವರು. ಟ್ರಸ್ಟ್‌ನ ಮೆನೇಜಿಂಗ್ ಟ್ರಸ್ಟಿ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಎಚ್.ಎನ್. ರಮೇಶ್‌ಗೆ ಬೀಳ್ಕೊಡುಗೆ
ಮಣಿಪಾಲ: ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದ ಎಚ್.ಎನ್. ರಮೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಮಣಿಪಾಲದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇತ್ತೀಚೆಗೆ ಇಲಾಖೆ ವತಿಯಿಂದ ಜರುಗಿತು. ಈ ಸಂದರ್ಭ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭಾರ ಸಿ. ಮಲ್ಲಿಕಾರ್ಜುನ, ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಸುರೇಂದ್ರಪ್ಪ, ಹಿರಿಯ ಮೋಟಾರು ವಾಹನ ನಿರೀಕ್ಷಕ ಸಿ.ರವಿಶಂಕರ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಹರೀಶ್, ಮೋಟಾರು ವಾಹನ ನಿರೀಕ್ಷಕರಾದ ಬಿ.ಎಸ್. ಚನ್ನಪ್ಪ, ವಿಶ್ವನಾಥ್ ನಾಯ್ಕ್ ಹಾಗೂ ಬಸ್ ಮಾಲಕರ ಸಂಘದ ಪ್ರತಿನಿಧಿಗಳು, ಮೋಟಾರು ವಾಹನ ಚಾಲನ ಪ್ರಾಂಶುಪಾಲರು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement