ಮದಿರೆ ಕುಡಿದು ಮಾನಿನಿ ಸಾವು
ಮಂಗಳೂರು: ಬಂದರು ಫೆಲಿಕ್ಸ್ ಬಜಾರ್ನಲ್ಲಿ ವಿಪರೀತ ಮದ್ಯ ಕುಡಿದು ಅಪರಿಚಿತ ಮಹಿಳೆ ಮೃತಪಟ್ಟಿದ್ದಾಳೆ. ಮಂಗಳವಾರ ಮದ್ಯ ಕುಡಿದು ಅಸ್ವಸ್ಥಳಾಗಿದ್ದ ಮಹಿಳೆಯನ್ನು ವೆನ್ಲಾಕ್ಗೆ ಒಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಳು. 45 ವರ್ಷ ವಯಸ್ಸು, ಕಾಫಿ ಕಲರ್ ಸೀರೆ, ಬಾಪ್ ಕಟ್, ಉರುಟು ಮುಖ. ಬಜಾರ್ ಪರಿಸರದಲ್ಲಿ ಅಲೆದಾಡುತ್ತಾ ಬದುಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.