ಇಂದಿನಿಂದ ಕಾಪು ಎಲ್ಲೂರು ಬಂಗಾರಾಲು ಬನದಲ್ಲಿ ಬ್ರಹ್ಮಕಲಶ
ಮಂಗಳೂರು: ಕಾಪು ಎಲ್ಲೂರು ಬಂಗಾರಾಲು ಬನದಲ್ಲಿ ನಾಗಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಅಶ್ಲೇಷಾ ಬಲಿ, ಅನ್ನ ಸಂತರ್ಪಣೆ, ಅಷ್ಟಪವಿತ್ರ ನಾಗಬ್ರಹ್ಮ ಮಂಡಲ ಸೇವೆ ಫೆ.1ರಿಂದ 3ರ ವರೆಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಧರ್ಮಪಾಲ ದೇವಾಡಿಗ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಫೆ.3ರಂದು ಬ್ರಹ್ಮಕಲಶಾಭಿಷೇಕ ರಾತ್ರಿ 12.30ರಿಂದ ನಾಗಬ್ರಹ್ಮ ಮಂಡಲ ಸೇವೆ ಜರುಗಲಿದೆ. ಬೆಳಗ್ಗೆ 11ಕ್ಕೆ ಧರ್ಣಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.