ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೇರ್ಪಟ್ಟ ಕೈಗಳ ಯಶಸ್ವಿ ಮರು ಜೋಡಣೆ

Rashmi Kasaragodu
Updated On : 1 Feb 2013, 12:26 pm





ಮಂಗಳೂರು: ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಬೇರ್ಪಟ್ಟ ಕೈಗಳ ಯಶಸ್ವಿ ಮೈಕ್ರೋವ್ಯಾಸ್ಕುಲರ್ ಮರು ಜೋಡಣಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.
 ಗುರುವಾರ ಸುದ್ದಿಗೋಷ್ಠಿಯಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ವಿವರ ನೀಡಿದರು.
ಮೂಲ್ಕಿ ರೇಲ್ವೆ ನಿಲ್ದಾಣ ಬಳಿ ಸೆ.28ರಂದು ಮೂಡುಬಿದಿರೆಯ ಶರತ್‌ಚಂದ್ರ ಎಂಬವರಿಗೆ ತಂಡವೊಂದು ಹಲ್ಲೆ ನಡೆಸಿ ಪರಾರಿಯಾಗಿತ್ತು. ಘಟನೆಯಲ್ಲಿ ಅವರ ಎಡಗೈ ಭುಜದಿಂದ ಸಂಪೂರ್ಣ ಬೇರ್ಪಟ್ಟಿತು ಹಾಗೂ ಬಲಗೈ ಮೊಣಕೈಯ ಕೆಳಭಾಗದಲ್ಲಿ ಸಂಪೂರ್ಣ ತುಂಡಾಗಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಸುಕಿನ ಜಾವ 4 ಗಂಟೆಗೆ ಎ.ಜೆ.ಆಸ್ಪತ್ರೆಗೆ ಶರತ್‌ಚಂದ್ರರನ್ನು ಕರೆತರಲಾಯಿತು. ಜತೆ ರೇಲ್ವೆ ನಿಲ್ದಾಣದಲ್ಲಿ ಬಿದ್ದಿದ್ದ ಎರಡು ಕೈಗಳನ್ನು ಆಸ್ಪತ್ರೆಗೆ ತರಲಾಯಿತು.  ಆಸ್ಪತ್ರೆಗೆ ತಂದಾಗ ಅತಿಯಾದ ರಕ್ತಸ್ರಾವದಿಂದ ಗಾಯಾಳು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಬೇರ್ಪಟ್ಟ ಕೈಗಳನ್ನು ಸತತ 8 ಗಂಟೆಗಳ ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸೆ ಮೂಲಕ ಮರು ಜೋಡಿಸಲಾಯಿತು. ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗ ಮುಖ್ಯಸ್ಥ ಡಾ.ದಿನೇಶ್ ಕದಂ ನೇತೃತ್ವದಲ್ಲಿ ಡಾ.ಸನತ್ ಭಂಡಾರಿ, ಅರಿವಳಿಕೆ ತಜ್ಞ ಡಾ.ತ್ರಿವಿಕ್ರಮ ತಂತ್ರಿ, ಡಾ.ರಾಜೇಶ್ ಹುಕ್ಕೇರಿ, ಎಲುಬು ಮತ್ತು ಮೂಳೆ ಶಸ್ತ್ರಚಿಕಿತ್ಸಕ ಡಾ.ಶ್ರೀಧರ ಶೆಟ್ಟಿ ತಂಡ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿತ್ತು. ಈಗ ಶರತ್‌ಚಂದ್ರ ಫಿಸಿಯೋಥೆರಪಿ ಪಡೆಯುತ್ತಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಈ ವೈದ್ಯಕೀಯ ತಂಡ 25ಕ್ಕೂ ಮೇಲ್ಪಟ್ಟು ಇಂಥ ಸಂಕೀರ್ಣ ಮರು ಜೋಡಣಾ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ಸುಮಾರು 1 ಸಾವಿರ ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಯನ್ನು ಕಳೆದ 9 ವರ್ಷಗಳಲ್ಲಿ ನಿರ್ವಹಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement