ಸಾಮರಸ್ಯ ನಡಿಗೆ ಕಾಂಗ್ರೆಸ್ ಅಂತ್ಯ: ಫ್ರಾಂಕ್ಲಿನ್ ವ್ಯಂಗ್ಯ
ಮಂಗಳೂರು: ಫೆ.1ರಂದು ಮಲ್ಪೆ ಕಡಲತೀರದಲ್ಲಿ ಸಮಾಪನಗೊಳ್ಳುವ ಕಾಂಗ್ರೆಸ್‌ನ ಸಾಮರಸ್ಯ ನಾಟಕದ ನಡಿಗೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಚಿತಾಭಸ್ಮದ ವಿಸರ್ಜನೆ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೋ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರು ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಸಾಮರಸ್ಯ ನಾಟಕದ ಕೊನೆಯ ದೇಖಾವೆ ಪ್ರದರ್ಶಿಸುತ್ತಿದ್ದಾರೆ. ಜಿಲ್ಲೆಯ ಶಾಂತಿಯುವ ಬದುಕನ್ನು ಸಾಮರಸ್ಯ ಹೆಸರಲ್ಲಿ ಮಾಡಲು ಹೊರಟಿದ್ದಾರೆ.
ಜಿಲ್ಲೆಯಲ್ಲಿ ನಡೆಯುವ ಲವ್‌ಜಿಹಾದ್, ಗೋಹತ್ಯೆ, ಮತಾಂತರ, ಮಾದಕ ದ್ರವ್ಯ ಸಾಗಣೆ ಮುಂತಾದ ಸಮಾಜಘಾತಕ ಚಟುವಟಿಕೆಯಲ್ಲಿ ನಿರತರಾದವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಕಾರು ಓವರ್‌ಟೇಕ್: ಸ್ಕೂಟರ್ ಸವಾರ ಸಾವು
ಮಂಗಳೂರು: ಕೋಟೆಕಾರ್ ಬೀರಿ ಅರಣ್ಯ ಚೆಕ್‌ಪೋಸ್ಟ್ ಬಳಿ ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ವಿಠಲ ಪೈ ಮೃತಪಟ್ಟಿದ್ದಾರೆ. ವಾಹನ ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆ ಬಲಬದಿ ಚಲಾಯಿಸಿ ಕೈನೆಟಿಕ್ ಸ್ಟೈಲ್‌ಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ವಿಠಲ ಪೈ ಮೃತಪಟ್ಟರು. ಉಳ್ಳಾಲ ಸೋಮನಾಥ ದೇವಸ್ಥಾನ ಬಳಿಯ ನಿವಾಸಿ ಪ್ರದೀಪ್ ಹೆಗ್ಡೆ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚಾಲಕ ಅಲಿಕುಂಞ ವಿರುದ್ಧ ಪ್ರಕರಣ ದಾಖಲಾಗಿದೆ.