ಹೊಸಮಠದಲ್ಲಿ ಪರಸ್ಪರ ಹಲ್ಲೆ: ದೂರು, ಪ್ರತಿದೂರು
ಉಪ್ಪಿನಂಗಡಿ: ಉರುಂಬಿ ಅಣೆಕಟ್ಟು ವಿಚಾರದಲ್ಲಿ ಎಸಿ ಜನಾಭಿಪ್ರಾಯ ಸಂಗ್ರಹ ಮಾಡುತ್ತಿದ್ದಾಗ ನಡೆದ ಮಾತಿನ ಚಕಮಕಿಯ ಮುಂದುವರಿದ ಭಾಗವಾಗಿ ಕ್ಷುಲ್ಲಕ ವಿಚಾರದಲ್ಲಿ ಹೊಸಮಠ ಪೇಟೆಯಲ್ಲಿ ಪರಸ್ಪರ ಹಲ್ಲೆ ನಡೆದಿರುವ ಬಗ್ಗೆ ಕಡಬ ಪೊಲೀಸರಿಗೆ ದೂರು ನೀಡಲಾಗಿದೆ.
ಕುಟ್ರುಪಾಡಿ ಗ್ರಾ.ಪಂ. ಸದಸ್ಯೆ ಎಲ್ಸಿ ತೋಮಸ್ ಈ ಬಗ್ಗೆ ದೂರು ನೀಡಿದ್ದು, ತನ್ನ ಮನೆ ಉಳಿಪ್ಪು ಕಡೆ ಹೋಗುತ್ತಿದ್ದಾಗ ಪ್ರವೀಣ್ ಎಂಬಾತ ಬ್ಯಾಗ್ ಎಳೆದಾಡಿ ಕಾಲಿನಿಂದ ಒದ್ದರು. ಅಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರವೀಣ್ ಅವರು ಪೊಲೀಸರಿಗೆ ಪ್ರತಿ ದೂರು ನೀಡಿ, ತಾನು ಮನೆ ಕಡೆ ಹೋಗಲು ನಿಂತಿದ್ದಾಗ ಎಂ.ಎಂ. ಸುನೀಲ್ ಎಂಬವರು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ನಮ್ಮೊಳಗೆ ಗಲಾಟೆ ನಡೆಯುತ್ತಿದ್ದಾಗ ಜೀಪ್ನಲ್ಲಿ ಬಂದ ಎಲ್ಸಿ ತೋಮಸ್ ನನ್ನ ಶರ್ಟ್ ಎಳೆದರು ಎಂದು ತಿಳಿಸಿದ್ದಾರೆ.