ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ: ಕಿಮ್ಮನೆ

Vishwanath S
Updated On : 4 Jul 2013, 11:33 am

ಸುಳ್ಯ: ಈಗಾಗಲೇ ಶೈಕ್ಷಣಿಕ ವರ್ಷ ಆರಂಭಗೊಂಡಿರುವುದರಿಂದ ಈ ಸಂದರ್ಭದಲ್ಲಿ ಮಹತ್ತರ ಬದಲಾವಣೆಗಳು ಸಾಧ್ಯವಿಲ್ಲ. ಈಗಾಗಲೇ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಮುಂದಿನ ವರ್ಷದಿಂದ ಇಲಾಖೆಯ ಎಲ್ಲ ನ್ಯೂನತೆಗಳನ್ನು ಸರಿಪಡಿಸಿ ಗುಣಾತ್ಮಕ ಶಿಕ್ಷಣದೆಡೆಗೆ ಹೆಜ್ಜೆ ಇಡುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಇಲ್ಲಿನ ಅರಂತೋಡು ಬಳಿಯ ಬೀಜದಕೊಚ್ಚಿ- ಗೂನಡ್ಕದಲ್ಲಿರುವ ತೆಕ್ಕಿಲ್ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ಆಂಗ್ಲ ಮಾಧ್ಯಮ ಪ್ರೌಢಶಾಲೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ನಿರೀಕ್ಷೆ ಬೇಡ. ಆದರೆ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಾನು ವಿಮುಖನಾಗುವುದಿಲ್ಲ. ಯಾವುದೇ ಇಲಾಖೆಗೂ ಸೀಮಿತವಾದ ಅನುದಾನವಿರುತ್ತದೆ. ಶಿಕ್ಷಣ ಇಲಾಖೆಗೆ ಮೀಸಲಿಟ್ಟ ಅನುದಾನದಲ್ಲೂ ಅಕ್ಷರ ದಾಸೋಹಕ್ಕೆ, ಬೈಸಿಕಲ್‌ಗೆ ಎಂದು ಬಹಳಷ್ಟು ಹಣ ವಿನಿಯೋಗವಾಗುತ್ತದೆ. ಹೀಗಾಗಿ ಆರ್ಥಿಕ ಕೊರತೆ ಕೂಡ ಶಿಕ್ಷಣ ಕ್ಷೇತ್ರ ಮೇಲೆತ್ತುವಲ್ಲಿ ಸವಾಲೆನಿಸುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement