ಪ್ರೊ.ಎಸ್ವಿಪಿ ಕೃತಿ ಮರುಮುದ್ರಣ: ಧನ ಸಹಾಯಕ್ಕೆ ಸಮಿತಿ ಕೋರಿಕೆ
ಮಂಗಳೂರು: ಹಿರಿಯ ಕವಿ, ವಿಮರ್ಶಕ, ವಿದ್ವಾಂಸ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟರ ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಭಟ್ಟರ ಜನ್ಮಶತಮಾನೋತ್ಸವವನ್ನು ವರ್ಷವಿಡಿ ಆಚರಿಸಲು ತೀರ್ಮಾನಿಸಲಾಗಿದೆ.
ಈ ಸಂದರ್ಭ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟರು ರಚಿಸಿರುವ 70 ಕೃತಿಗಳ ಮರುಮುದ್ರಣ ಹಾಗೂ ಪ್ರಸರಣ ಮಾಡುವ ಸಂಸ್ಮರಣ ಕಾರ್ಯಕ್ರಮ ನಡೆಸಲಾಗುವುದು. ಈ ಯೋಜನೆಗೆ ಹೆಚ್ಚಿನ ಹಣದ ಅಗತ್ಯವಿದ್ದು ಭಟ್ಟರ ಶಿಷ್ಯರು, ಅಭಿಮಾನಿಗಳು ದೇಣಿಗೆ ನೀಡುವಂತೆ ಸಮಿತಿ ಅಧ್ಯಕ್ಷ ಏರ್ಯ ಲಕ್ಷ್ಮಿನಾರಾಯಣ ಆಳ್ವ ಪ್ರಕಟಣೆಯಲ್ಲಿ ಕೋರಿದ್ದಾರೆ.
ಆಸಕ್ತರು ಕರ್ಣಾಟಕ ಬ್ಯಾಂಕ್ ಮಂಗಳೂರು ಖಾತೆ-4762500102483101 (ಐಎಫ್ಎಸ್ಸಿ-ಕೆಎಆರ್ಬಿ 0000476)ಗೆ ಪಾವತಿಸಿ. ವಿವರಗಳನ್ನು: ಕಾರ್ಯದರ್ಶಿ ಡಾ.ನರಸಿಂಹಮೂರ್ತಿ ಆರ್., ಮಾಣಿಕ್ಯ, ಗಾಂಧಿನಗರ, ಕಾವೂರು ಅಂಚೆ, ಮಂಗಳೂರು, 575015 ವಿಳಾಸಕ್ಕೆ ಕಳುಹಿಸುವಂತೆ ಆಳ್ವ ವಿನಂತಿಸಿದ್ದಾರೆ.