ನಾಳೆ ಕನ್ನಡಪ್ರಭ-ಎಕ್ಸ್ಪ್ರೆಸ್ನಿಂದ ಶಿಕ್ಷಣ ಮೇಳ
ಶಿವಮೊಗ್ಗ: 'ಕನ್ನಡಪ್ರಭ' ಹಾಗೂ 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ನಗರದ ಬಾಲರಾಜ ಅರಸ್ ರಸ್ತೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಶಿಕ್ಷಣ ಮೇಳ ಹಮ್ಮಿಕೊಂಡಿದೆ. ಕಾರ್ಯಕ್ರಮದ ಕುರಿತು ಮಾಹಿತಿ ನೀಡಿರುವ 6 ರೀವ್ಸ್ ಸಂಸ್ಥೆಯ ಸಿಇಒ ಕಿರಣ್ ಹಾಗೂ 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಶಿವಮೊಗ್ಗ ಶಾಖೆಯ ವ್ಯವಸ್ಥಾಪಕ ಎಲ್.ಎನ್. ಮೂರ್ತಿ, ಪಿಯುಸಿ ನಂತರ ಮುಂದಿನ ಶಿಕ್ಷಣ ಹಾದಿಯ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಗೊಂದಲ ಹೆಚ್ಚಾಗುತ್ತಿದೆ. ಇವುಗಳನ್ನು ನಿವಾರಿಸುವುದೇ ಈ ಮೇಳದ ಉದ್ದೇಶವೆಂದರು. ರಾಜ್ಯದ ಎರಡನೇ ಹಂತದ 15 ಜಿಲ್ಲಾ ಕೇಂದ್ರಗಳಲ್ಲಿಯೂ ಈ ಮೇಳಗಳನ್ನು ನಡೆಸಲಾಗುತ್ತಿದೆ ಎಂದರು.