ಅಪರಾಧ ಸುದ್ದಿಗಳು
ಕಲ್ಲುಗುಡ್ಡೆ: ಮನೆಗೆ ಸಿಡಿಲು ಬಡಿದು ಇಬ್ಬರಿಗೆ ಗಾಯ
ಉಪ್ಪಿನಂಗಡಿ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಕಾಲೋನಿಯೊಂದರ ಎರಡು ಮನೆಗಳಿಗೆ ಸಿಡಿಲು ಬಡಿದು ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಕಲ್ಲುಗುಡ್ಡೆ ಕಾಲೋನಿ ನಿವಾಸಿ ಚೀಂಕ್ರ ಎಂಬವರ ಪುತ್ರಿ ಚಂದ್ರವತಿ (18) ಹಾಗೂ ಪಕ್ಕದ ಮನೆಯ ಚೋಮ ಎಂಬವರ ಪತ್ನಿ ಗುಲಾಬಿ (40) ಗಾಯಗೊಂಡವರು.
ಸಿಡಿಲಿನ ಆಘಾತದಿಂದ ಗುಲಾಬಿ ಕಾಲಿಗೆ ಮತ್ತು ಚಂದ್ರಾ ಅವರ ಬೆನ್ನು, ಕೈ ಕಾಲುಗಳಿಗೆ ಗಾಯಗಳಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೀಂಕ್ರ ಮನೆಗೆ ಸಿಡಿಲು ಬಡಿತ ಉಂಟಾಗಿ ಮನೆಯ ಗೋಡೆಗಳು ಬಿರುಕುಗೊಂಡಿವೆ. ವಯರಿಂಗ್ ವ್ಯವಸ್ಥೆ ಸುಟ್ಟು ಹೋಗಿದೆ. ಮನೆಯ ಗೋಡೆಯ ಕಪಾಟು ಪುಡಿಯಾಗಿದೆ.
ಕೆಸರಿನಲ್ಲಿ ಸಿಲುಕಿ ಬಾಲಕ ಸಾವು
ಚಿಕ್ಕೋಡಿ: ಕೃಷ್ಣಾ ನದಿಂು ತೀರದಲ್ಲಿ ಮೀನು ಹಿಡಿಂುಲು ಹೋದ ಬಾಲಕನೊಬ್ಬ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಅಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹತ್ತಿರ ಸಂಭವಿಸಿದೆ. ರಾಂುಬಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದ ತೌಸೀಫ್ ಇಬ್ರಾಹಿಂ ಕುರಣೆ (16) ಮೃತಪಟ್ಟವನು. ಭಾನುವಾರ ಶಾಲೆಗೆ ರಜೆಯಿದ್ದ ಕಾರಣ ನದಿಗೆ ಮೀನು ಹಿಡಿಂುಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಅಂಕಲಿ ಠಾಣೆಂುಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಸುಳಿವು ಪತ್ತೆ
ಮಂಗಳೂರು: ಮೂಡುಬಿದಿರೆ ಜೈನ ಬಸದಿಯಿಂದ ಕೋಟ್ಯಂತರ ಮೌಲ್ಯದ ವಿಗ್ರಹ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಸುಳಿವು ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಶನಿವಾರ ಭುವನೇಶ್ವರದಲ್ಲಿ ಆರೋಪಿಯನ್ನು ಬಂಧಿಸಿ ದರೋಡೆ ಮಾಡಿದ ವಿಗ್ರಹ ವಶಪಡಿಸಿಕೊಂಡಿರುವುದನ್ನು ಪೊಲೀಸರು ದೃಢಪಡಿಸುತ್ತಿಲ್ಲ. ಈಗಾಗಲೇ 3 ತಂಡ ರಚಿಸಿ ಮಾಹಿತಿ ಕಲೆಹಾಕಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಆರೋಪಿಯೊಬ್ಬನ ಖಚಿತ ಸುಳಿವು ಸಿಕ್ಕಿದ್ದು, ಶೀಘ್ರವೇ ಕಾರ್ಯಾಚರಣೆ ಪೂರ್ತಿಗೊಳ್ಳಲಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತೂರಾಯ 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.