ಪಾರದರ್ಶಕ ಆಡಳಿತ: ಸಚಿವ ರೈ ಭರವಸೆ
ಮಂಗಳೂರು: ಇಲ್ಲಿವರೆಗಿನ ರಾಜಕೀಯ ಜೀವನದಲ್ಲಿ ಅಗೌರವ ಉಂಟುಮಾಡುವ ಯಾವುದೇ ಕಾರ್ಯ ಮಾಡದೆ ಪಾರದರ್ಶಕ ಆಡಳಿತ ನೀಡಿದ್ದೇನೆ ಎಂಬ ತೃಪ್ತಿಯಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಕಾವೂರಿನಲ್ಲಿ ಭಾನುವಾರ ನಡೆದ ಬಂಟರ ಸಂಘದ 12ನೇ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ, ತಮ್ಮ ಸಮುದಾಯದ ಜನರೊಂದಿಗೆ ಹೊರಗಿರಲು ಯಾವತ್ತೂ ಸಾಧ್ಯವಿಲ್ಲ. ಸಾಮಾಜಿಕ ಜೀವನದೊಂದಿಗೆ ತಮ್ಮವರೊಂದಿಗೂ ಸಂಬಂಧ ಗಟ್ಟಿಗೊಳಿಸುವ ಅಗತ್ಯವಿದೆ. ಮನುಷ್ಯನಾದ ಮೇಲೆ ಕ್ರಿಯಾಶೀಲರಾಗಿರಬೇಕು. ಆಗ ಮಾತ್ರ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘಗಳು ಕಾರ್ಯಪ್ರವೃತ್ತವಾಗಬೇಕು ಎಂದರು.