ಮದ್ದಿನೇನಿ ಇಂದು ಅಧಿಕಾರ ಸ್ವೀಕಾರ
ಮಂಗಳೂರು: ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಸಹೋದರನ ಅನಧಿಕೃತ ಕಟ್ಟಡ ನಿರ್ಮಾಣ ಆರೋಪ ವಿವಾದದ ಬಳಿಕ ವರ್ಗಾವಣೆಯಾಗಿದ್ದ ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ದಕ್ಷಿಣ ಕನ್ನಡ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯಾಗಿ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ. ದಕ್ಷ ಅಧಿಕಾರಿ ಎಂದು ಹೆಸರು ಪಡೆದ ಈಗಿನ ಸಿಇಒ ಡಾ.ವಿಜಯ ಪ್ರಕಾಶ್ ಹಠಾತ್ ವರ್ಗಾವಣೆಯಾಗಿದ್ದು, ಅವರಿಗಿನ್ನೂ ಯಾವುದೇ ಸ್ಥಳವನ್ನೂ ತೋರಿಸಿಲ್ಲ.