ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದ್ಯಾರ್ಥಿಗಳಿಗೆ ಕಬ್ಬಿಣಾಂಶ ಮಾತ್ರೆ

Mainashree
Updated On : 14 Jul 2013, 10:14 am

ಮಣಿಪಾಲ: ಪೋಲಿಯೊ ನಿವಾರಣೆ ಮಾದರಿಯಲ್ಲೇ ರಕ್ತಹೀನತೆ ನಿವಾರಣೆ ಆಂದೋಲನ ಕೈಗೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ಶಾಲಾ ಮಕ್ಕಳಿಗೆ ವಾರದಲ್ಲಿ 1 ಬಾರಿ ಮಧ್ಯಾಹ್ನದ ಬಿಸಿಯೂಟದ ಬಳಿಕ ಕಬ್ಬಿಣಾಂಶದ ಮಾತ್ರೆ ವಿತರಿಸುವ ಯೋಜನೆಗೆ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಬೆಂಗಳೂರಿನಲ್ಲಿ ಜು. 17ರಂದು ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು. ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಳವಡಿಸಲಾದ 16 ಸ್ಲೈಸ್ ಬಿಗ್ ಬೋರ್ ಸ್ಕ್ಯಾನರ್ ಎಂಬ ಆಧುನಿಕ ಯಂತ್ರವನ್ನು ಭಾನುವಾರ ಉದ್ಘಾಟಿಸಿ, ಈ ಯೋಜನೆಯಂತೆ ಮುಂದಿನ 10 ವರ್ಷಗಳೊಳಗೆ ಅನಿಮಿಯಾ (ರಕ್ತಹೀನತೆ) ಸಂಪೂರ್ಣ ನಿರ್ಮೂಲನೆಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಸ್ವಹಿತಾಸಕ್ತಿ ಆರೋಪ: ತಾನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸುಮಾರು 1500 ಅರ್ಜಿಗಳು ಬಂದಿದ್ದು, ಅವೆಲ್ಲವೂ ವರ್ಗಾವಣೆಗೆ ಸಂಬಂಧಪಟ್ಟದ್ದಾಗಿವೆ. 'ಡಿ' ಗ್ರೂಪಿನ ನೌಕರರಿಂದ ಹಿಡಿದು ಮೇಲ್ವರ್ಗದ ವೈದ್ಯರೆಲ್ಲರೂ ಜನರ ಹಾಗೂ ಆಸ್ಪತ್ರೆಯ ಬಗ್ಗೆ ಕಾಳಜಿ ವಹಿಸದೆ ಸ್ವಹಿತಾಸಕ್ತಿ ನೋಡುತ್ತಿದ್ದಾರೆ. ಇದು ನಿವಾರಣೆಯಾಗಬೇಕಾದರೆ ನೈತಿಕ ಮೌಲ್ಯಗಳನ್ನು ವೈದ್ಯ ಶಿಕ್ಷಣದಲ್ಲಿ ಆಳವಡಿಸಬೇಕು ಎಂದರು. ರಾಜ್ಯದಲ್ಲಿ 30 ವರ್ಷ ದಾಟಿದ ಎಲ್ಲರೂ ವರ್ಷಕ್ಕೊಮ್ಮೆ ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement